ಜಯಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ: ಶ್ರೇಯಸ್ ಪಟೇಲ್ ತಾಯಿ

ಜಯಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ: ಶ್ರೇಯಸ್ ಪಟೇಲ್ ತಾಯಿ

Published : Jun 05, 2024, 09:08 AM ISTUpdated : Jun 05, 2024, 09:09 AM IST

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು ಹಿನ್ನೆಲೆ ಮಗನ ಗೆಲುವಿಗೆ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. 
 

ಹಾಸನ ಲೋಕಸಭಾ ಕ್ಷೇತ್ರದಲ್ಲಿ (Hassan Lok Sabha Constituency) ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಗೆಲುವು ಹಿನ್ನೆಲೆ ಮಗನ ಗೆಲುವಿಗೆ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. ಮಗನ ಗೆಲುವಿಗೆ ಸಂತಸ ಹೊರಹಾಕಿದ ತಾಯಿ ಅನುಪಮಾ, ಸತತ ಸೋಲಿನಿಂದ ಕೆಂಗಟ್ಟಿದ್ದ ನಮಗೆ ಗೆಲುವು ಸಿಕ್ಕಿದ್ದು ಖುಷಿ ತಂದಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಗೆ  (Siddaramaiah, D K Shivakumar) ಧನ್ಯವಾದ ಅರ್ಪಿಸುತ್ತೇನೆ, ಹಾಗೆಯೇ ಹಾಸನದ ಜನತೆಗೆ ಧನ್ಯವಾದ ಎಂದಿದ್ದಾರೆ.

ಹಾಸನದ ಜನತೆ ದರ್ಪದ ರಾಜಕಾರಣಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮೂರು ಬಾರಿ ಸೋತರು ನಮಗೆ ಪಕ್ಷ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ, ಪದೇಪದೇ ಸೋಲನ್ನು ತಡೆಯುವ ಶಕ್ತಿ ನನ್ನಲ್ಲಿ ಇರಲಿಲ್ಲ, ಈ ಗೆಲುವು ನಮಗೆ ಅವಶ್ಯಕತೆ ಇತ್ತು. ಸತತ ಸೋಲುಂಡಾಗ ಕೆಲ ವಿರೋಧ ಪಕ್ಷದ ನಾಯಕರು ನನ್ನನ್ನು ಹೀಯಾಳಿಸಿದ್ದರು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ  ಆಫ್ಟ್ರಾಲ್ ಜಯಲಕ್ಷ್ಮಿ ರೈಸ್ ಮಿಲ್ ಓನರಲ್ಲ ಅಂತಾ ಹಾಸನದ ದೊಡ್ಡ ನಾಯಕರು ಹೇಳಿದ್ದರು.ಈಗ  ನಾನು ಅವರಿಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ, ಜಯ ಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ ಅಂತಾ ಎಂದು ಟಾಂಗ್‌ ನಿಡಿದ್ದಾರೆ.

ಇದನ್ನೂ ವೀಕ್ಷಿಸಿ:  ಏನೂ ಮಾಡದೇ ಆತ ಕೊಲೆಯಾಗಿದ್ದೇಕೆ..? ಮೀಟರ್ ಬಡ್ಡಿ ದಂಧೆಗೆ ಬಿತ್ತಾ ಪುಡಿ ರೌಡಿಯ ಹೆಣ ?

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?