Mar 17, 2023, 10:35 PM IST
ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಮೈತ್ರಿ ಬಹಿರಂಗಗೊಂಡಿದೆ. ಇಷ್ಟು ದಿನ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ ಇದೀಗ ಬಟಾ ಬಯಲಾಗಿದೆ. 2018ರಲ್ಲಿ ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಚುನಾವಣೆ ಎದುರಿಸಿತ್ತು. ಆದರೆ ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮೋಸ ಮಾಡಿದೆ ಎಂದು ಎಸ್‌ಡಿಪಿಐ ಮುಖಂಡರು ಬಹಿರಂಗಪಡಿಸಿದ್ದಾರೆ.ಕಾಂಗ್ರೆಸ್ ಬಿರಿಯಾನಿ ಕೊಟ್ಟು ಸಾಕಿ ಬೆಳೆಸಿದ ಕೂಸು ಎಸ್‌ಡಿಪಿಐ. ಇದೀಗ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಹೊಂದಾಣಿಕೆ ರಾಜಕೀಯ ಬಯಲಾಗಿದೆ. ತನಿಖೆ ನಡೆದರೆ ಕಾಂಗ್ರೆಸ್ ಮುಖವಾಡ ಕಳಚಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇತ್ತ ನಾವು ಮೈತ್ರಿ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.