Oct 19, 2021, 5:30 PM IST
ಬೆಂಗಳೂರು, (ಅ.19): ಪೊಲೀಸರು ಕೇಸರಿ ದಿರಿಸಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವಿವಾದ ಸೃಷ್ಟಿಸಿದ ಖಾಕಿ ಪಡೆಯ ಕೇಸರಿ ದಿರಿಸಿನ ಫೋಟೋ: ಸ್ಪಷ್ಟನೆ ಕೊಟ್ಟ ಗೃಹ ಸಚಿವ
ಇಂದು (ಅ.19) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಕೇಸರಿ ಬಗ್ಗೆ ಯಾಕೆ ಜಿಗುಪ್ಸೆ? ಕೇಸರಿ ತ್ಯಾಗದ ಸಂಕೇತವಾಗಿದೆ. ಆದರೆ ಕೇಸರಿಯನ್ನು ಕಂಡರೆ ಯಾಕೆ ವಿಚಲಿತರಾಗಿದ್ದೀರಿ, ಗೊಂದಲಕ್ಕೆ ಒಳಗಾಗುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.