Oct 29, 2020, 3:11 PM IST
ಬೆಂಗಳೂರು (ಅ. 29): 'ನಾನು ಕಣ್ಣೀರ್ ಹಾಕಿ ಮತ ಕೇಳೋದು ಇಲ್ಲ, ಪ್ರಚಾರ ಮಾಡೋದು ಇಲ್ಲ. ನನಗದು ಗೊತ್ತೂ ಇಲ್ಲ. 25 ವರ್ಷಗಳ ಹಿಂದೆ ಕಳೆದುಕೊಂಡ ನನ್ನ ತಾಯಿಯ ಬಗ್ಗೆ ಮಾತನಾಡಿದಾಗ ಭಾವುಕನಾಗುವ ಹಾಗೆ ಆಯಿತು ಎಂದು ಪ್ರಚಾರದ ವೇಳೆ ಮುನಿರತ್ನ ಹೇಳಿದ್ದಾರೆ.
ರಾರಾದಲ್ಲಿ ಕೈ- ಕೇಸರಿ ಕಲಿಗಳ ಮಾರಾಮಾರಿ: ಸಿದ್ದು ಘರ್ಜನೆ, ಮುನಿರತ್ನ ಕಣ್ಣೀರು ವರ್ಕೌಟ್ ಆಗುತ್ತಾ?
ತಾಯಿಯನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಬಂದಿದ್ದೇ ಹೊರತು ಚುನಾವಣೆಯಲ್ಲಿ ಮತ ಬೇಡುವುದಕ್ಕಲ್ಲ. ನಾನು ಕೆಲಸ ಮಾಡಿದೀನಿ. ಹಾಗಾಗಿ ಮತಭಿಕ್ಷೆ ಕೇಳುತ್ತಿದ್ದೇನೆ' ಎಂದಿದ್ದಾರೆ. ಇದಕ್ಕೆ ಕೆಲವರು ಸಿನಿಮಾ, ಕಟ್, ಟೇಕ್, ಶೂಟಿಂಗ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.ಅದಕ್ಕೆಲ್ಲಾ ಉತ್ತರ ಕೊಡುವುದಿಲ್ಲ' ಎಂದಿದ್ದಾರೆ.