Nov 11, 2020, 12:35 PM IST
ಬೆಂಗಳೂರು (ನ. 11): ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಎದುರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರಾಭವಗೊಂಡಿದ್ದಾರೆ. ಫಲಿತಾಂಶದ ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
'ಜನಾದೇಶಕ್ಕೆ ಗೌರವ ಕೊಡುವುದು ಎಲ್ಲರ ಕರ್ತವ್ಯ. ಹಾಗೆ ನಿಮ್ಮ ಜನಾದೇಶಕ್ಕೆ ನಾನು ತಲೆಬಾಗುತ್ತೇನೆ. ಜೀವನದಲ್ಲಿ ಸೋತು ಗೆದ್ದವಳು ನಾನು. ಈ ಚುನಾವಣೆಯಲ್ಲಿ ನಾನು ಸೋತಿರಬಹುದು. ಅದರೆ ನಾಳೆ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ' ಎಂದು ಕುಸುಮಾ ಹೇಳಿದ್ದಾರೆ.
'ರಾರಾ'ದಲ್ಲಿ ಮುನಿರತ್ನ ಹ್ಯಾಟ್ರಿಕ್, ಶಿರಾದಲ್ಲಿ ವಿಜಯೇಂದ್ರ ಮ್ಯಾಜಿಕ್ : ಬಿಜೆಪಿ ಗೆಲುವಿನ ಸೀಕ್ರೆಟ್ ಇದು!
'ಬಹಳ ಕಡಿಮೆ ಸಮಯದಲ್ಲಿ, ಪ್ರಚಾರಕ್ಕಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ, ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನಿಮ್ಮ ಹೋರಾಟಗಳಲ್ಲಿ ನಾನು ಭಾಗಿಯಾಗುತ್ತೇನೆ' ಎಂದಿದ್ದಾರೆ.