ಡಿಕೆ ರವಿಯವರ ತಾಯಿ ಗೌರಮ್ಮ, ನನ್ನ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಂತ್ರೆ ಸರಿ ಇರೋದಿಲ್ಲ ಎಂದು ಸೊಸೆ ಕುಸುಮಾ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರು, (ಅ.02): ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳು ಅಂತಿಮ ಕಸರತ್ತಿನಲ್ಲಿ ತೊಡಗಿದೆ. ಅದರಲ್ಲೂ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿಯನ್ನಾಗಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರನ್ನ ಕಣಕ್ಕಿಳಿಸಲು ಮಾತುಕತೆಗಳು ನಡೆದಿವೆ.
RR ನಗರಕ್ಕೆ ಡಿ.ಕೆ. ರವಿ ಪತ್ನಿ ಬದಲು ಅಚ್ಚರಿ ಹೆಸ್ರು: ಕುತೂಹಲ ಕೆರಳಿಸಿದ ಹಿರಿಯ ನಾಯಕರ ಸಭೆ
ಆದರೆ, ಇತ್ತ ಡಿಕೆ ರವಿಯವರ ತಾಯಿ ಗೌರಮ್ಮ, ನನ್ನ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಂತ್ರೆ ಸರಿ ಇರೋದಿಲ್ಲ ಎಂದು ಸೊಸೆ ಕುಸುಮಾ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.