Jul 25, 2022, 5:13 PM IST
ಕರ್ನಾಟಕದಲ್ಲಿ ಮುಂಬರೋ ವಿಧಾನಸಭಾ ಚುನಾವಣೆಗೆ ಭಾರಿ ಸಿದ್ಧತೆ ಎಲ್ಲಾ ಪಕ್ಷಗಳಿಂದ ಆಗ್ತಾ ಇದೆ. ಕಾಂಗ್ರೆಸ್ ಸಿಎಂ ಹುದ್ದೆ ಆಕಾಂಕ್ಷಿಗಳ ಬಗ್ಗೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ, ಎಂಬಿ ಪಾಟೀಲ್, ಡಿಕೆಶಿ ಒಬ್ಬರ ಹಿಂದೊಬ್ಬರು ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ಇದೀಗ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಣಿಸಿಕೊಂಡಿದ್ದಾರೆ.
ಪಕ್ಷ ಪೂಜೆ ಜತೆ ವ್ಯಕ್ತಿ ಪೂಜೆಯನ್ನೂ ಮಾಡ್ತೇನೆ, ತಪ್ಪೇನು? ಡಿಕೆಶಿಗೆ ಜಮೀರ್ ಟಾಂಗ್
ಕಾಂಗ್ರೆಸ್ಸಿನಲ್ಲಿ ದಲಿತ ಸಿಎಂ ಅನ್ನೋ ಟಾಕ್ ಎಲೆಕ್ಷನ್ ಬಂದಾಗ ಕೇಳಿ ಬರುತ್ತೆ. ದಲಿತರನ್ನ ಮತ ಬ್ಯಾಂಕ್ ಮಾತ್ರ ಮಾಡಿಕೊಂಡಿದ್ದಾರೆ ಅನ್ನೋ ಟೀಕೆಯನ್ನ ಸದ್ದಿಲ್ಲದಂತೆ ಮಾಡೋಕೆ ದಲಿತರನ್ನೇ ಸಿಎಂ ಮಾಡ್ತಾರೆ ಅನ್ನೋ ಮಾತು ಜೋರಾಗುತ್ತೆ. ಈ ಬಗ್ಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಫಲಿತಾಂಶಕ್ಕೆ ಮುನ್ನವೇ ‘ನಾನು ಸಿಎಂ, ನಾನು ಸಿಎಂ’ ಎಂದು ಹೇಳುವುದು ಸರಿಯಲ್ಲ. ಸಿಎಂ ಯಾರಾಗಬೇಕು ಎಂಬುದು ಮೈಸೂರಿನಲ್ಲೂ, ಬೆಂಗಳೂರಿನಲ್ಲೂ, ಗುಲ್ಬರ್ಗದಲ್ಲೂ ತೀರ್ಮಾನವಾಗುವುದಿಲ್ಲ. ಪಕ್ಷದ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.