Mar 21, 2022, 5:14 PM IST
ಬೆಂಗಳೂರು, (ಮಾ.21): ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಉಳಿದಿರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಪ್ಲಾನ್‌ಗಳು ನಡೆದಿವೆ. ಅಲ್ಲದೇ ಸಂಪುಟದಿಂದ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂಬ ಚಿಂತನೆಗಳು ನಡೆದಿದೆ. ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಹಾಕುತ್ತಿದೆ.
Karnataka Politics: ಜೆಪಿ ನಡ್ಡಾ ಬರ್ತಿದ್ದಾರೆ.. 4+4 ಸೂತ್ರ... ಯಾರಿಗೆಲ್ಲ ಸಂಪುಟ ಚಾನ್ಸ್!
ಸಂಪುಟ ವಿಸ್ತರಣೆಗೆ ಕೆಲವೊಂದು ಅಡೆತಡೆಗಳು ಎದುರಾಗಿದೆ. ಸದ್ಯ ನಾಲ್ಕು ಸ್ಥಾನಗಳಿಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಈ ಪೈಕಿ ಸಿ.ಪಿ ಯೋಗೀಶ್ವರ್, ರಾಜೂಗೌಡ, ಎಂಪಿ ಕುಮಾರ ಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಎಂಪಿ ರೇಣುಕಾಚಾರ್ಯ ಸೇರಿದಂತೆ ಇನ್ನೂ ಹಲವರು ಶಾಸಕರು ಆಕಾಂಕ್ಷಿಯಾಗಿದ್ದಾರೆ. ಇವರಷ್ಟೇ ಮಾತ್ರವಲ್ಲಿ ಸಿಎಂ ಸ್ಥಾನ ಕಳೆದಿಕೊಂಡಿರುವ ಬಿಎಸ್ ಯಡಿಯೂರಪ್ಪ ಇದೀಗ ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಯಾರಿಗೆ ಲಕ್? ಯಾರಿಗೆ ಕೊಕ್? ಎಲ್ಲವೂ ಸಸ್ಪೆನ್ಸ್