ಅಥಣಿ ಟಿಕೆಟ್ ಬಿಟ್ಟುಕೊಡುವುದಿಲ್ಲ ಎಂದು ಸವದಿ ಪುತ್ರ ಸವಾಲು ಹಾಕಿದ್ದರೆ, ಅಥಣಿ ಟಿಕೆಟ್ ಕೊಡದಿದ್ದರೆ ನಾನೂ ಸ್ಪರ್ಧಿಸಲ್ಲ ಎಂದು ರಮೇಶ್ ಜಾರಕಿಹೊಳಿ ಬಿಜೆಪೆಗೆ ಸಂದೇಶ ರವಾನಿಸಿದ್ದಾರೆ. ಇವರ ಟಿಕೆಟ್ ಗುದ್ದಾಟ ಬಿಜೆಪಿಗೆ ತಲೆನೋವಾಗಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಅಥಣಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ್ ಸವದಿ ನಡುವೆ ಟಿಕೆಟ್ ಕಿತ್ತಾಟ ಜೋರಾಗಿದೆ. ಅಥಣಿ ಕ್ಷೇತ್ರದಲ್ಲಿ ಜಾರಕಿಹೊಳಿ ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಇದೇ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿ ಪುತ್ರನಿಗೆ ಟಿಕೆಟ್ ನೀಡಲು ಒತ್ತಾಯ ಕೇಳಿಬಂದಿದೆ. ಇದು ಜಾರಕಿಹೊಳಿ ಹಾಗೂ ಸವದಿ ನಡುವೆ ಕಿತ್ತಾಟಕ್ಕೆ ವೇದಿಕೆಯಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಸ್ಪರ್ಧಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.