ಪಿಎಸ್ಐ ನೇಮಕಾತಿ ಹಗರಣದ ಮತ್ತೊಂದು ರಹಸ್ಯ ಬಯಲಾಗಿದೆ. ಅಭ್ಯರ್ಥಿ ಕೈಯಿಂದ 15 ಲಕ್ಷ ರೂಪಾಯಿ ಲಂಚ ಪಡೆದಿರುವ ಬಿಜೆಪಿ ಶಾಸಕನ ಆಡಿಯೋ ಲೀಕ್ ಆಗಿದೆ. ನೇಮಕಾತಿ ಹಗರಣ, ಬೆಂಗಳೂರು ಮಳೆ ಅವಾಂತರ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಪಿಎಸ್ಐ ಅಕ್ರಮದಲ್ಲಿ ಇದೀಗ ಬಿಜೆಪಿ ಕನಗಿರಿ ಶಾಸಕ ದಡೇಸುಗೂರ್ ಹೆಸರು ಕೇಳಿಬಂದಿದೆ. ಅಭ್ಯರ್ಥಿಯಿಂದ 15 ಲಕ್ಷ ರೂಪಾಯಿ ಲಂಚ ಪಡೆದಿರುವುದಾಗಿ ಆರೋಪ ಕೇಳಿಬಂದಿದೆ. ಇದೀಗ ಅಭ್ಯರ್ಥಿಯ ತಂದೆ ಪರಸಪ್ಪ ಹಾಗೂ ಶಾಸಕ ನಡುವಿನ ಸಂಭಾಷಣೆ ಆಡಿಯೋ ಲೀಕ್ ಆಗಿದೆ. ಈ ಆಡಿಯೋದಲ್ಲಿ ಪೊಲೀಸ್ ನೇಮಕಾತಿಗೆ 15 ಲಕ್ಷ ರೂಪಾಯಿ ನೀಡಿರುವುದನ್ನು ವಾಪಸ್ ನೀಡಲು ಕೇಳಿಕೊಂಡಿದ್ದಾರೆ. ಅತ್ತ ಬಿಜೆಪಿ ಶಾಸಕ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಪರಸಪ್ಪನಿಗೆ ಬಿಜೆಪಿ ಶಾಸಕರೇ ಧಮ್ಕಿ ಹಾಕಿ ಬಾಯಿ ಮುಚ್ಚಿಸಿದ್ದಾರೆ ಅನ್ನೋ ಆರೋಪ ಬಲವಾಗುತ್ತಿದೆ. ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಮಳೆ ಅವಾಂತರ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ