ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಗೆಲ್ಲಲು ಬಿಜೆಪಿ ಕಸರತ್ತು ನಡೆಸಿದ್ದು, ಕರುನಾಡ ಕುರುಕ್ಷೇತ್ರದಲ್ಲಿ ಮತ್ತೆ ಮೋದಿ ಮೇನಿಯಾ ಶುರುವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರಣತಂತ್ರ ಹೆಣೆದ್ರಾ ಎಂಬ ಪ್ರಶ್ನೆ ಮೂಡಿದೆ. ನಿನ್ನೆ ರಾತ್ರಿಯೇ ರಾಜಭವನದಲ್ಲಿ ಮೋದಿ ವಾಸ್ತವ್ಯ ಹೂಡಿದ್ದು, ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಂವಾದ ನಡೆಸಿದ್ದಾರೆ. ಸಿನಿಮಾ, ಉದ್ಯಮ ಹಾಗೂ ಕ್ರೀಡಾ ವಲಯದ ಗಣ್ಯರಿಗೆ ರಾತ್ರಿ ಭೋಜನಕ್ಕೆ ಆಹ್ವಾನ ನೀಡಲಾಗಿತ್ತು. ನಿತಿನ್ ಕಾಮತ್, ತರುಣ್ ಮೆಹ್ತಾ, ವಿಜಯ್ ಕಿರಂಗದೂರು ನಟ ಯಶ್ ಸೇರಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.