Karnataka Assembly Elections: ಈ ವರ್ಷವೇ ನಡೆಯುತ್ತಾ ರಾಜ್ಯ ವಿಧಾನಸಭಾ ಚುನಾವಣೆ?

Karnataka Assembly Elections: ಈ ವರ್ಷವೇ ನಡೆಯುತ್ತಾ ರಾಜ್ಯ ವಿಧಾನಸಭಾ ಚುನಾವಣೆ?

Published : Mar 30, 2022, 04:01 PM ISTUpdated : Mar 30, 2022, 04:07 PM IST

*ಅವಧಿ ಪೂರ್ವ ಚುನಾವಣೆಗೆ ಬಿಜೆಪಿ ಸಿದ್ಧತೆ
*ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ
*ರಾಜ್ಯಕ್ಕೆ ಒಂದೇ ದಿನ ರಾಹುಲ್‌, ಅಮಿತ ಶಾ ಭೇಟಿ

ಬೆಂಗಳೂರು (ಮಾ. 30): ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಪಕ್ಷಗಳು ಸಕಲ ತಯಾರಿ ನಡೆಸುತ್ತಿದ್ದು ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಈ ನಡುವೆ ಇದೇ ವರ್ಷ ಚುನಾವಣೆ ನಡೆಯಲಿದೆ ಎಂಬಂತೆ ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. "ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆಸಿದರೂ ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಾಗಿದೆ. ನಮ್ಮ ಮೂಲಗಳ ಪ್ರಕಾರ ನ.27ರಂದು ವಿಧಾನಸಭಚುನಾವಣೆ ನಡೆಸಲು ಸಿದ್ಧತೆ ನಡೆದಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇತ್ತ "ಚುನಾವಣೆ ಎದುರಿಸಲು ಸಿದ್ದರಿದ್ದೇವೆ, ಜನ ನಮ್ಮ ಪರವಾಗಿದ್ದಾರೆ" ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಇದನ್ನೂ ಓದಿ: Karnataka Election ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ!

ಈ ನಡುವೆ  ಕಾಂಗ್ರೆಸ್‌ ವರಿಷ್ಟ ರಾಹುಲ್‌ ಗಾಂಧಿ ಹಾಗೂ ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್‌ ಶಾ ರಾಜ್ಯಕ್ಕೆ ಒಂದೇ ದಿನ ಭೇಟಿ ನೀಡಲಿದ್ದಾರೆ. ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕರ್ನಾಟಕದಲ್ಲಿ  ಪಂಚರಾಜ್ಯಗಳ ಚುನವಾಣೆ ಫಲಿತಾಂಶ ಬಳಿಕ ರಾಜಕೀಯ ಚಟುವಟಿಕೆಗಳಿ ಗರಿಗೆದರಿವೆ. ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ತನ್ನ ಬಲ ಪ್ರದರ್ಶಿಸಲು ಕರ್ನಾಟಕ ವೇದಿಕೆಯಾಗಿದ್ದರೇ ಇತ್ತ ಪಂಚರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿರುವ ಬಿಜೆಪಿ ಮತ್ತೊಂದು ರಾಜ್ಯ ಗೆದ್ದು ಪಕ್ಷ ಬಲಪಡಿಸಲು ಇದೊಂದು ಉತ್ತಮ ಅವಕಾಶ. ಈ ಎಲ್ಲ ಬೆಳವಣಿಗೆಗಳು ರಾಜ್ಯದಲ್ಲಿ ಇದೇ ವರ್ಷ ಚುನಾವಣೆ ನಡೆಯಬಹುದು ಎಂಬ ವದಂತಿಗಳಿಗೆ ಪುಷ್ಟಿ ನೀಡುತ್ತಿವೆ. ಈ ಕುರಿತ ಒಂದು ವರದಿ ಇಲ್ಲಿದೆ. 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more