ನಾಳೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಬಿ.ಎಸ್ ಯಡಿಯೂರಪ್ಪ ಹುಟ್ಟು ಹಬ್ಬದಂದೇ ಲೋಕಾರ್ಪಣೆಯಾಗುತ್ತಿದೆ.
ಮಲೆನಾಡ ಹೆಬ್ಬಾಲಿನಲ್ಲಿ ನಿರ್ಮಾಣವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಾಳೆ ಉದ್ಘಾಟನೆ ಆಗುತ್ತಿದೆ. ಯಡಿಯೂರಪ್ಪರ ಕನಸ್ಸಿನಂತೆಯೇ ಕಮಲಾಕೃತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. 449 ಕೋಟಿ ಖರ್ಚು ಹಾಗೂ 20 ತಿಂಗಳ ಪರಿಶ್ರಮದಲ್ಲಿ ಬಿ.ವೈ ರಾಘವೇಂದ್ರ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಅಂದು ತಂದೆ ಅಡಿಪಾಯ ಹಾಕಿದ್ದನ್ನು, ಇಂದು ಮಗ ಭವ್ಯ ವಿಮಾನ ನಿಲ್ದಾಣ ನಿರ್ಮಿಸಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ.