Apr 12, 2023, 8:29 PM IST
ಬೆಂಗಳೂರು (ಏ.12): ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಅಥಣಿ ಟಿಕೆಟ್ ಮಿಸ್ ಆಗಿದೆ. ಅಥಣಿಯಿಂದ ಬಿಜೆಪಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ್ ಸವದಿ, ನೇರವಾಗಿ ಸಿಎಂ ವಿರುದ್ಧವೇ ಕಿಡಿಕಾರಿದರು.
ತಮಗೆ ಟಿಕೆಟ್ ತಪ್ಪಿಸಿದ್ದರ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪಾತ್ರವೇ ಹೆಚ್ಚಾಗಿರುವಂತೆ ಕಾಣುತ್ತಿದೆ ಎಂದು ಅವರು ಟಾಂಗ್ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ನಾನು ಈಗಾಗಲೇ ಸವದಿ ಅವರೊಂದಿಗೆ ಮಾತನಾಡಿದ್ದೇನೆ. ಏನೋ ಟಿಕೆಟ್ ತಪ್ಪಿದ ಬೇಸರದಲ್ಲಿ ಈ ಮಾತುಗಳಲ್ಲಿ ಆಡಿದ್ದಾರೆ. ಅವರಿಗೆ ಸಮಾಧಾನ ಮಾಡುವೆ ಎಂದು ಹೇಳಿದ್ದಾರೆ.
Party Rounds: ವಿಧಾನಸಭೆ ಚುನಾವಣೆಗೆ ಬಿಜೆಪಿ ಕಲಿಗಳು ರೆಡಿ!
ಇನ್ನೊಂದೆಡೆ ಅಥಣಿ ಟಿಕೆಟ್ ಪಡೆದಿರುವ ಮಹೇಶ್ ಕುಮಟಳ್ಳಿ, ಸವದಿ ರಾಜೀನಾಮೆ ನೀಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರೆ, ಹಾಗೇನಾದರೂ ಸವದಿ ಕಾಂಗ್ರೆಸ್‌ಗೆ ಬಂದರೆ ಅವರಿಗೆ ಸ್ವಾಗತಿಸುವುದಾಗಿ ರಾಜು ಕಾಗೆ ಹೇಳಿದ್ದಾರೆ.