ಪಂಚರತ್ನ ಯಾತ್ರೆಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಸಿ.ಪಿ ಯೋಗೇಶ್ವರ್'ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ರಾಜಕಾರಣಿಗಳ ನಡುವೆ ಏಟು-ತಿರುಗೇಟುಗಳ ಸಹ ಶುರುವಾಗಿವೆ. ನಾನು ಅಕ್ರಮವಾಗಿ ಯಾವುದೇ ಹಣ ಸಂಪಾದಿಸಿಲ್ಲ ಎಂದು ಮಾಜಿ ಸಚಿವ ಯೋಗೇಶ್ವರ್‌ಗೆ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ. ನಾನು ಪಂಚರತ್ನ ಕಾರ್ಯಕ್ರಮಕ್ಕೆ ಒಂದು ನಯಾ ಪೈಸೆ ಕೊಟ್ಟಿಲ್ಲ. ಕಾರ್ಯಕರ್ತರು ಹಾಗೂ ಶಾಸಕರು ಹಣ ಖರ್ಚು ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಾಡಿನ ಜನತೆ ಪಂಚರತ್ನ ಯಾತ್ರೆ ಬಗ್ಗೆ ಮಾತಾಡ್ತಿದ್ದಾರೆ, ಕಾರ್ಯಕರ್ತರ ಜೊತೆ ಜನತೆಯೂ ಭಾಗವಹಿಸಿದ್ದಾರೆ. ನನ್ನ ಹೋರಾಟಕ್ಕೆ ಜನರು ರೈತರು ಬೆಂಬಲ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.