ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಯು ಟರ್ನ್, ಉಚಿತ ಗ್ಯಾರೆಂಟಿಗೆ ಕಂಡೀಷನ್ ಅಪ್ಲೈ!

May 16, 2023, 10:56 PM IST

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಉಚಿತ ಗ್ಯಾರೆಂಟಿ ಘೋಷಿಸಿದೆ. ಇನ್ನು ನಾಯಕರು ಭಾಷಣದ ವೇಳೆ ಈ ಗ್ಯಾರೆಂಟಿ ಯಾವುದೇ ಷರತ್ತುಗಳಿಲ್ಲ. ಎಲ್ಲರಿಗೂ ಅನ್ವಯವಾಗಲಿದೆ ಎಂದಿತ್ತು. ಚುನಾವಣೆಯಲ್ಲಿ 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಇತಿಹಾಸ ರಚಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಉಚಿತ ಗ್ಯಾರೆಂಟಿಯ ಸ್ವರೂಪ ಬದಲಾಗಿದೆ. ಉಚಿತ ಗ್ಯಾರೆಂಟಿಗೆ ಕಂಡೀಷ್ ಅಪ್ಲೈ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಮೊದಲೇ ಕ್ಯಾಬಿನೆಟ್‌ನಲ್ಲಿ 5 ಗ್ಯಾರೆಂಟಿ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಸುಮ್ಮನೆ ಕೊಡಲು ಆಗುವುದಿಲ್ಲ. ಅದಕ್ಕೆ ಒಂದು ಮಾನದಂಡೆ ಇರಬೇಕಲ್ಲ. ಎಲ್ಲವನ್ನೂ ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.