ಇಂದು ಪರಿಷತ್ ಅಧಿವೇಶನ: ಸಭಾಪತಿ VS ಸರ್ಕಾರ ನಡುವೆ ವಾರ್..?

Dec 15, 2020, 11:34 AM IST

ಬೆಂಗಳೂರು (ಡಿ. 15): ತಮ್ಮ ವಿರುದ್ಧ ಬಿಜೆಪಿಯ 11 ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಸೂಚನೆ ಕ್ರಮ ಬದ್ದವಾಗಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ನೀಡಿರುವ ಆದೇಶ , ಇಂದು ವಿಧಾನಪರಿಷತ್ ಅಧಿವೇಶನದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ. 

ಆಡಳಿತಾರೂಢಿ ಬಿಜೆಪಿ ಸದಸ್ಯರು ಸಭಾಪತಿಗಳು ಇಂತಹ ಆದೇಶವನ್ನು ಸದನದಲ್ಲೇ ಪ್ರಕಟಿಸಬೇಕು. ಚರ್ಚಿಸಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.