
ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..?
ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಹಾರ ಕುಲುಮೆ ಸಿದ್ದುಗೆ ಚಿನ್ನ. ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪ್ರಚಂಡ ಗೆಲುವು ಸಾಧಿಸಿದೆ ಕಮಲ ಪಡೆ.. ಇದೀಗ ಬಿಹಾರದ ಈ ರಿಸೆಲ್ಟ್ನ ಎಫೆಕ್ಟ್ ಕರುನಾಡಿನ ರಾಜಕೀಯದ ಮೇಲೆ ಬೀಳ್ಬೋದು. ಅದ್ರಲ್ಲಿಯೂ ಸಿದ್ದು-ಡಿಕೆ ಮಧ್ಯೆ ನಡೆಯುತ್ತಿರೋ ಸಿಂಹಾಸನ ಸಮರದ ಮೇಲೆ ಇದ್ರ ನೇರ ಪರಿಣಾಮ ಬೀಳುತ್ತೆ ಎನ್ನಲಾಗ್ತಿದೆ.
ಹಾಗಿದ್ರೆ ಬುದ್ಧನ ನಾಡಿನ ಈ ಚುನಾವಣಾ ಫಲಿತಾಂಶದಿಂದ ಇಲ್ಲಿ ಯಾರ ಬಲ ಹೆಚ್ಚುತ್ತೆ..? ಯಾರ ಶಕ್ತಿ ಕುಗ್ಗುತ್ತೆ..? ಅಷ್ಟಕ್ಕೂ ಬಿಹಾರದಲ್ಲಿ ಮಹಾಘಟಬಂಧನ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಯಾಕೆ..? ಚುನಾವಣೆ ಗೆಲ್ಬೇಕು ಅಂತಲೇ ಎನ್ಡಿಎ ಹಾಗು ಮಹಾಘಟಬಂಧನ್ ಎರಡೂ ಕೂಡ ಪ್ರಯತ್ನಿಸಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಸಿದ್ದು. ಆದ್ರೆ ಗೆಲುವು ಒಲಿದಿದ್ದು ಮಾತ್ರ ಕಮಲ ಪಡೆಗೆ. ಹಾಗಿದ್ರೆ ಎನ್ಡಿಎ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳ್ಯಾವು.? ಬಿಹಾರ ಚುನಾವಣಾ ಕಾಳಗದಲ್ಲಿ ಯಾರ್ಯಾರು, ಎಷ್ಟೆಷ್ಟು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಹಾರ ಚುನಾವಣಾ ಬೆಂಕಿಯಲ್ಲಿ ನಿತೀಶ್ ಕುಮಾರ್ ಅವರ ಬಾಣ ಗುರಿ ಮುಟ್ಟಿದೆ, ಮೋದಿ ಕಮಲ ಅರಳಿದೆ. ಮಹಾಘಟಬಂಧನ್ ಮಾತ್ರ ತೀವ್ರ ಹತಾಶೆ ಅನುಭವಿಸಿದೆ. ಹಾಗಿದ್ರೆ, ಇಲ್ಲಿ ಯಾವ್ಯಾವ ಪಕ್ಷ ಎಷ್ಟೆಷ್ಟು ಕ್ಷೇತ್ರಗಳನ್ನ ತಮ್ಮದಾಗಿಸಿಕೊಂಡಿವೆ.