Minister Madhuswamy viral audio: ಸಚಿವ ಮಾಧುಸ್ವಾಮಿ ಹೇಳಿಕೆಗೆ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು (ಆ. 16): ಸರ್ಕಾರ ಆಡಳಿತ ನಡೆಸುತ್ತಿಲ್ಲ ಮ್ಯಾನೇಜ್ ಮಾಡುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೆ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಮಾಧುಸ್ವಾಮಿ ಹಿರಿತನಕ್ಕೆ ಈ ರೀತಿ ಹೇಳಿಕೆ ಶೋಭೆ ತರೋದಿಲ್ಲ, ಸರ್ಕಾರದಲ್ಲಿ ಸಚಿವ ಮಾಧುಸ್ವಾಮಿ ಸಹ ಒಂದು ಭಾಗ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಮಾತನಾಡಬಾರದು" ಎಂದು ಮುನಿರತ್ನ ಹೇಳಿದ್ದಾರೆ.
"ಸರ್ಕಾರದ ಪ್ರತಿ ಅಂಶದಲ್ಲೂ ಮಾಧುಸ್ವಾಮಿ ಭಾಗವಹಿಸುತ್ತಿದ್ದಾರೆ, ಇಂಥ ಹೇಳಿಕೆಗೂ ಮಾಧುಸ್ವಾಮಿ ಪಾಲುದಾರರಾಗಿರುತ್ತಾರೆ" ಎಂದು ಕೋಲಾರದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ. ಸಚಿವ ಮಾಧುಸ್ವಾಮಿಯವರು ಹಿರಿಯರು, ಕಾನೂನು ಸಚಿವರಾಗಿದ್ದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದು ಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರ ನಡೆಯುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಆಡಿಯೋ ವೈರಲ್