Jan 21, 2021, 3:54 PM IST
ಬೆಂಗಳೂರು (ಜ. 21): ಅಬಕಾರಿ ಖಾತೆ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಉತ್ತಮ ಖಾತೆ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಇದೀಗ ಅಬಕಾರಿ ಖಾತೆ ನೀಡಿದ್ದಾರೆ. ಅಬಕಾರಿಯಲ್ಲಿ ಮಾಡುವ ಕೆಲಸ ಏನಿದೆ..? ನಾನು ಕೆಲಸ ಮಾಡುವ ಖಾತೆ ಇದಲ್ಲ. ಪಕ್ಷಕ್ಕೆ ಹೆಸರು ತಂದು ಕೊಡುವ, ಬಡವರಿಗೆ ಸಹಾಯ ಮಾಡುವ ಖಾತೆಯಾದ್ರೆ ಕೆಲಸ ಮಾಡಬಹುದು' ಎಂದು ಮಾಧ್ಯಮದೆದುರು ಎಂಟಿಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.