Jan 30, 2023, 3:45 PM IST
ಇನ್ನೊಬ್ಬರ ಮೇಲೆ ಕೈ ಮಾಡಿ ತೋರಿಸುವುದು ಸುಲಭ. ಆರೋಪ ಮಾಡುವುದನ್ನು ಬಿಟ್ಟು ಸುಳ್ಳು ಹೇಳುವುದನ್ನು ಬಿಟ್ಟು ದಾಖಲೆ ಸಮೇತ ಜನರ ಮುಂದೆ ಬಂದರೆ ಆ ದಾಖಲೆಗೆ ಉತ್ತರವನ್ನು ಕೊಡುತ್ತೇವೆ ಎಂದು ಚೆನ್ನರಾಜ್ ಹಟ್ಟಿಹೊಳಿ ಹೇಳಿದರು. ರಮೇಶ್ ಜಾರಕಿಹೊಳಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಎಂದರು. ಏನಾದ್ರೂ ಸಾಕ್ಷಿ ಪುರಾವೆ ಇದ್ದರೆ ಸಿಡಿ ಬಿಡುಗಡೆ ಮಾಡಲಿ, ಹೆಣ್ಮಕ್ಕಳ ಬಗ್ಗೆ ಜಾರಕಿಹೊಳಿ ಮನಸ್ಥಿತಿ ತಿಳಿಯುತ್ತದೆ. ಅವರು ಸುಳ್ಳು ಮಾತಾಡುವುದನ್ನು ಕಲಿತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.