Apr 6, 2022, 1:54 PM IST
ಚಾಮರಾಜಪೇಟೆ ಶಾಸಕ ಜಮೀರ್ (Zameer Ahmad) ಅಂದ್ರೆ ವಿವಾದಗಳ ಹೆಡ್ ಆಫೀಸ್, ಕಲರ್‌ಫುಲ್ ವ್ಯಕ್ತಿತ್ವದ ಮಾಸ್ಟರ್‌ಪೀಸ್. ಮಾತಿಗೆ ನಿಂತರೆ ಒಂದೋ ಸದ್ದು ಮಾಡ್ತಾರೆ, ಇಲ್ಲಾ ವಿವಾದ ಮಾಡ್ಕೋತಾರೆ. ಇಂತಹ ಜಮೀರ್ ಸಾಹೇಬ್ರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಪಕ್ಷದ ಕಾರ್ಯಕ್ರಮಗಳು, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗಲೂ ಹಾಜರಾಗಿರಲಿಲ್ಲ.
News Hour: ಆಜಾನ್ ಮೈಕ್ ಶಬ್ದ ನಿಯಂತ್ರಿಸಲು ಕ್ರಮ ಖಚಿತ, ಹಿಂದೂ-ಮುಸ್ಲಿಮರಿಗೆ ಖಡಕ್ ಸಂದೇಶ!
ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳಲು ಡಿಕೆಶಿ ಜೊತೆಗಿನ ಮುಸುಕಿನ ಗುದ್ದಾಟ ಕಾರಣ ಎನ್ನಲಾಗುತ್ತಿದೆ. ಹಿಜಾಬ್ ವಿವಾದದಲ್ಲಿ ಹಿಜಾಬ್ ಹಾಕದಿದ್ರೆ ಅತ್ಯಾಚಾರ ಆಗುತ್ತದೆ ಎಂದು ಜಮೀರ್ ಹೇಳಿಕೆ ಕೊಟ್ಟಿದ್ದರು. ಇದು ಡಿಕೆಶಿಗೆ ಗರಂ ಆಗಿ, ಜಮೀರ್ ಕ್ಷಮೆಯಾಚಿಸಬೇಕು ಎಂದಿದ್ದರು. ಇದಕ್ಕೆ ಜಮೀರ್ ಒಪ್ಪದಿದ್ದಾಗ ಹೈಕಮಾಂಡ್ ಮೂಲಕ ಹೇಳಿಸಿ, ಕ್ಷಮೆ ಕೇಳಿಸಲಾಯಿತು. ಹೀಗಾಗಿ ವ್ಯಾಪಾರ ಧರ್ಮ ದಂಗಲ್, ಆಜಾನ್ ವಿವಾದವಾಗುತ್ತಿದ್ದರೂ ಜಮೀರ್ ಮಾತನಾಡುತ್ತಿಲ್ಲ.