Sathish Jarikholi's remark on 'Hindu' word: ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಬೀಸಿದ್ದ ಶಾಸಕ ದಿನೇಶ್ ಗುಂಡುರಾವ್ ಉಲ್ಟಾ ಹೊಡೆದಿದ್ದಾರೆ.
ಹಿಂದೂ ಪದದ ಅರ್ಥವೇ ಅಶ್ಲೀಲ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ, ಕಾಂಗ್ರೆಸ್ ಪಕ್ಷ ಖಂಡಿಸಿದೆ. ಹಿಂದೂ ಪದದ ಕುರಿತ ಹೇಳಿಕೆಯನ್ನು ಡಿಕೆಶಿ ಹಾಗೂ ಸುರ್ಜೇವಾಲ ಖಂಡಿಸಿದ್ದಾರೆ. ಇದನ್ನು ತಿಳಿದು ಗಾಬರಿಗೆ ಬಿದ್ದು ದಿನೇಶ್ ಗುಂಡುರಾವ್ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಎಲ್ಲಿ ಹೇಗೆ ಮಾತಾಡಬೇಕು ಎಚ್ಚರಿಕೆ ಬೇಕು. ಸತೀಶ್ ಜಾರಕಿಹೊಳಿ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅವರು ಗೌರವದಿಂದ ನಡೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.