ನಮಗೆ ಧೈರ್ಯ ಇರೋದ್ರಿಂದಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ' ಎಂದು ಸಿದ್ದರಾಮಯ್ಯ ಟೀಕೆಗೆ ಅಶೋಕ್ ಉತ್ತರಿಸಿದ್ದಾರೆ.
ಬೆಂಗಳೂರು (ಅ. 28): 'ಸಿದ್ದರಾಮಯ್ಯನವರು ಪದೇ ಪದೇ 'ಬಿಜೆಪಿಯವರಿಗೆ ಧೈರ್ಯ ಇದೆಯೇನ್ರಿ? ಧಮ್ ಇದೆಯಾ? ಅಂತ ಪದೇ ಪದೇ ಚಾಲೆಂಜ್ ಹಾಕುತ್ತಾರೆ. ಇದಕ್ಕೆ ನಾನು ಸಿದ್ದರಾಮಯ್ಯನವರಿಗೆ ಉತ್ತರ ಕೊಡಲು ಬಯಸುತ್ತೇನೆ. ನಮಗೆ ಧೈರ್ಯ ಇರೋದ್ರಿಂದಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇನ್ನು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಮಾಡಿದ್ದೇವೆ. ನಂತರ ತ್ರಿವಳಿ ತಲಾಖನ್ನು ರದ್ದು ಮಾಡಿದ್ದೇವೆ. ನಮ್ಮ ಧಮ್ ಬಗ್ಗೆ ಪ್ರಶ್ನೆ ಮಾಡಬೇಡಿ. ನಿಮಗೆ ಧಮ್ ಇದ್ರೆ ಕಾಂಗ್ರೆಸ್ಸಿಗೆ ರಿಯಲ್ ಅಧ್ಯಕ್ಷರನ್ನು ಮಾಡಿದ್ರೆ ನಿಮಗೆ ಬಿಜೆಪಿ ಸೆಲ್ಯೂಟ್ ಹೊಡೆಯುತ್ತದೆ' ಎಂದು ಆರ್. ಅಶೋಕ್ ಹೇಳಿದ್ದಾರೆ.