Sushma Hegde | Published: Feb 1, 2025, 4:41 PM IST
ಕೇಂದ್ರ ಬಜೆಟ್‌ನಲ್ಲಿ ಕಿಸಾನ್ ಕಾರ್ಡ್ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಿದ್ದಾರೆ. ಇದಕ್ಕೆ ಬಿಡುಗಡೆ ಮಾಡುವ ಅನುದಾನವನ್ನು ಕಡಿತಗೊಳಿಸಲಾಗಿದೆ. ಬರೀ ಪೇಪರ್‌ನಲ್ಲಿ ಕೊಟ್ಟು ಸರಸ್ವತಿ ಪ್ರಸನ್ನ ಮಾಡಿ, ಲಕ್ಷ್ಮೀ ಪ್ರಸನ್ನ ಆಗದೇ ಇದ್ರೆ ರೈತರಿಗೆ ಏನ್ ಪ್ರಯೋಜನ? ಕಿಸಾನ್ ಕಾರ್ಡ್ ಸಾಲದ ಮಿತಿ ಏರಿಸಿ ಏನ್ ಲಾಭ? ಸುಮ್ಮನೆ ರೈತರಿಗೆ ಮೋಸ ಮಾಡುವ, ತಪ್ಪುದಾರಿಗೊಯ್ಯುವ ಕ್ರಮ ಇದು ಎಂದು ಸಚಿವ ಕೆಎನ್ ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ