Sep 15, 2023, 11:42 PM IST
ಬೆಂಗಳೂರು (ಸೆ.15): ಕಾಂಗ್ರೆಸ್ ಪಾಳಯದಲ್ಲಿ ಹೊಸ ಬಿಕ್ಕಟ್ಟು ಶುರುವಾಯ್ತಾ ಎನ್ನುವ ಅನುಮಾನ ಕಾಡಿದೆ. ಹರಿಪ್ರಸಾದ್ ಬಂಡಾಯ ಆರುವ ಮುನ್ನವೇ ಹೊಸ ದಾಳವನ್ನು ಸಚಿವ ಕೆ.ಎನ್ ರಾಜಣ್ಣ ಬಿಚ್ಚಿಟ್ಟಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೂರು ಸಮುದಾಯಕ್ಕೆ ಮೂರು ಡಿಸಿಎಂ ಸೃಷ್ಟಿಗೆ ಕೆಎನ್ ರಾಜಣ್ಣ ಬೇಡಿಕೆ ಇಟ್ಟಿದ್ದಾರೆ. ಇದು ರಾಜಣ್ಣ ಅವರ ಆಗ್ರಹವೋ? ಸಲಹೆಯೋ ಎನ್ನುವುದು ಗೊತ್ತಿಲ್ಲ. ಆದರೆ, ಅವರ ಈ ಮಾತು ಮತ್ತೊಂದು ಬಿಕ್ಕಟ್ಟಿನ ಕಿಡಿ ಹೊತ್ತಿಸುವ ಸಾಧ್ಯತೆ ಇದೆ.
ಬಿಕೆ ಹರಿಪ್ರಸಾದ್ ಭೇಟಿಯಾದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್
‘ಲೋಕಸಭಾ ಚುನಾವಣಾ ದೃಷ್ಟಿಯಿಂದ ಸಲಹೆ ಕೊಟ್ಟಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ 2-3 ಡಿಸಿಎಂ ಇರಲಿಲ್ಲವಾ? ನಮ್ಮಲ್ಲಿ ಕೂಡಾ ಇದ್ರೆ ತಪ್ಪೇನು ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಇನ್ನು ಹರಿಪ್ರಸಾದ್ ಬಂಡಾಯದ ವಿರುದ್ಧ ಸಿದ್ದು ಬಣದಿಂದ ಡಿಸಿಎಂ ಅಸ್ತ್ರ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಬಣದ ಕೆ. ಎನ್ ರಾಜಣ್ಣ ಮೂರು ಹೊಸ ಡಿಸಿಎಂ ದಾಳ ಉರುಳಿಸಿದ್ದಾರೆ.