* ಮಾತಿಗೆ ಬಂದರೆ ಕಾಂಗ್ರೆಸ್ ನಾಯಕರು ಡಿಪಿಆರ್ ಮಾಡಿದ್ದು ನಾವೇ ಎಂದು ಹೇಳ್ತಾರೆ
* ಡಿಪಿಆರ್ ಆಗಿದ್ದು ಮಾಜಿ ಕುಮಾರಸ್ವಾಮಿ ಅವಧಿಯಲ್ಲಿ
* ಡಿಪಿಆರ್ ಮಾಡಿದ್ದು ಒಂದು ದೊಡ್ಡ ಸಾಹಸನಾ?
ಚಿಕ್ಕಬಳ್ಳಾಪುರ(ಫೆ.27): ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯೊಂದು ಜನರನ್ನು ಮೂರ್ಖರನ್ನು ಮಾಡಲು ಹೊರಟಿರುವ ಪಾದಯಾತ್ರೆಯಾಗಿದೆ. ಮಾತಿಗೆ ಬಂದರೆ ಕಾಂಗ್ರೆಸ್ ನಾಯಕರು ಡಿಪಿಆರ್ ಮಾಡಿದ್ದು ನಾವೇ ಎಂದು ಹೇಳುತ್ತಾರೆ. ಅದು ಆಗಿದ್ದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಇದನ್ನು ಕಾಂಗ್ರೆಸ್ ಕ್ರೆಡಿಟ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಅಂತ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಮೇಕೆದಾಟು ವಿಚಾರವನ್ನ ಕಾಂಗ್ರೆಸ್ ನಾಯಕರು ರಾಜಕೀಯದ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಏಳೂವರೇ ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಬರೀ ಡಿಪಿಆರ್ ಮಾಡಿದೆ ಅಷ್ಟೇ. ಡಿಪಿಆರ್ ಮಾಡಿದ್ದು ಒಂದು ದೊಡ್ಡ ಸಾಹಸನಾ? ಅಂತ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
News Hour ರಷ್ಯಾ ದಾಳಿ ವಿರುದ್ಧ ವಿಶ್ವಸಂಸ್ಥೆಯಲ್ಲಿ ಖಂಡನಾ ನಿರ್ಣಯ, ಭಾರತ ತಟಸ್ಥ ನೀತಿಗೆ ಇದೆ ಕಾರಣ!