Apr 28, 2022, 6:34 PM IST
ಮಂಡ್ಯ (ಏ.28): ಸದ್ಯ ರಾಜಕಾರಣದಲ್ಲಿ ಸುಮಲತಾ ಅಂಬರೀಶ್ ಅವರದ್ದೇ ಸುದ್ದಿ...ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಭದ್ರಕೋಟೆಯಲ್ಲಿ ಹವಾ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನವಣೆಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಸುಮಲತಾ ಅವರಿಗೆ ಗಾಳ ಹಾಕಿದೆ.
ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?
ಬಿಜೆಪಿ ನಾಯಕರು (BJP Leaders) ರೆಡ್ ಕಾರ್ಪೆಟ್ ಹಾಕಿ ಸಂಸದೆ ಸುಮಲತಾ (MP Sumalatha) ಅವರಿಗೆ ಸ್ವಾಗತ ಕೋರಿದ್ದಾರೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರ ಮಾತುಕತೆಗಳು ಸಹ ಆಗಿವೆ ಎನ್ನುವ ಮಾಹಿತಿ ಇದ್ದು, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಈ ಬಿಜೆಪಿ ಸೇರ್ಪಡೆಯಾಗುವ ಸುದ್ದಿಗೆ ಸ್ವತಃ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ಕೊಟ್ಟಿದ್ದು ಹೀಗೆ...