ಮೋದಿ ರೋಡ್ ಶೋ‌ಗೆ ಟಕ್ಕರ್ ಕೊಡಲು ದೇವೇಗೌಡರ ಮಹಾಯಾತ್ರೆ! 100 ಕಿ.ಮೀ ಯಾತ್ರೆ ಹಿಂದೆ ನೂರಾರು ಲೆಕ್ಕಾಚಾರ!

Mar 16, 2023, 1:48 PM IST


ಬೆಂಗಳೂರು (ಮಾ.16):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇವೇಗೌಡರ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ರೋಡ್‌ ಶೋ ಮೂಲಕ ಅಬ್ಬರಿಸಿದ್ದರು. ಇನ್ನು ಡಿಕೆ. ಶಿವಕುಮಾರ್‌ ಅವರೂ ಕೂಡ ಗೌಡರ ವಿರುದ್ಧ ಗುಡುಗಿದ್ದರು. ಆದರೆ, ಇವರಿಬ್ಬರೂ ಠಕ್ಕರ್‌ ಕೊಡುವುದಕ್ಕೆ ಸಿದ್ಧವಾಗಿರುವ ಕರ್ನಾಟಕ ರಾಜಕೀತ ಭೀಷ್ಮ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ತಮ್ಮದರ್ಬಾರ್‌ ಶುರು ಮಾಡಲಿದ್ದಾರೆ. ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಕಿ.ಮೀ. ಮಹಾಯಾತ್ರೆಯನ್ನ ಮಾಡಲು ಮುಂದಾಗಿದ್ದಾರೆ.

ಒಕ್ಕಲಿಗರ ಒಡ್ಡೋಲಗದಲ್ಲಿ ದೇವೇಗೌಡರ ದಂಡಯಾತ್ರೆ ಈಗ ಆರಂಭವಾಗಲಿದೆ. 90 ವರ್ಷದ ವಯೋವೃದ್ಧ ಗೌಡರಿಂದ 100 ಕಿ.ಮೀ ಮಹಾಯಾತ್ರೆಯೇ ಆರಂಭವಾಗಲಿದೆ. ಒಟ್ಟು 25 ರಣಕ್ಷೇತ್ರಗಳಲ್ಲಿ ಮಹಾಯಾತ್ರೆ ನಡೆಯಲಿದ್ದು, ಮತಬೇಟೆಯನ್ನಾಡಲು ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ. ಈಗ ಆರಂಭವಾಗುತ್ತಿರುವ ದೇವೇಗೌಡರ 100 ಕಿ.ಮೀ ರೋಡ್ ಶೋನ ಹಿಂದೆ ನೂರಾರು ಲೆಕ್ಕಾಚಾರ ಅಡಗಿರುವುದಂತೂ ಸತ್ಯವಾಗಿದೆ. ಇದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿಯೂ ಕೂಡ ಆತಂಕ ಶುರುವಾಗಲಿದೆ. ಇನ್ನು ಯಾರಿಗೆ ಮತ ಹಾಕಬೇಕು ಎಂದು ಓಲಾಟದಲ್ಲಿರುವ ಮತದಾರರು ದೇವೇಗೌಡ ಆಗಮನದಿಂದ ಜೆಡಿಎಸ್‌ಗೆ ತಮ್ಮ ಮತಗಳನ್ನು ಒತ್ತಲು ದೃಢ ನಿರ್ಧಾರ ಮಾಡುವ ಸಾಧ್ಯತೆಗಳೂ ಹೆಚ್ಚಾಗುತ್ತದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.