ಮಹಾರಾಷ್ಟ್ರ ಸಿಎಂ ಆದ ಫಡ್ನವಿಸ್‌ಗೆ ಮೊದಲ ತಲೆನೋವು, ಮಹಾಯುತಿ ಸರ್ಕಾರದ ಮಂದೆ ಸವಾಲು!

Dec 6, 2024, 10:32 AM IST

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂಧ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದರೆ. ಏಕನಾಥ್ ಶಿಂಧೆ, ಅಜಿತ್ ಪವಾರ್ ಮನ ಒಲಿಸಿ ಫಢ್ನವಿಸ್ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಮುಖ್ಯಮಂತ್ರಿಯಾದ ಆರಂಭದಲ್ಲೇ ಫಡ್ನವಿಸ್ ತಲೆನೋವು ಹೆಚ್ಚಾಗಿದೆ. ಇದೀಗ ಫಡ್ನವಿಸ್ ಪ್ರತಿ ನಿರ್ಧಾರಕ್ಕೂ ಮೈತ್ರಿ ನಾಯಕರ ಜೊತೆ ಚರ್ಚಿಸಬೇಕಿದೆ. ಎರಡು ಪಕ್ಷಗಳನ್ನು ಒಟ್ಟಾಗಿ ತಗೆದುಕೊಂಡು ಹೋಗ್ಬೇಕು ಜೊತೆಗೆ ಬಿರುಕು ಮೂಡದಂತೆ ಸರ್ಕಾರ ಮುನ್ನಡೆಸುವ ಜವಾಬ್ದಾರಿ ಫಡ್ನವಿಸ್ ಮೇಲಿದೆ. ಇದರ ಜೊತೆಗೆ ಮಹಾರಾಷ್ಟ್ರ ಮೀಸಲಾತಿಯಲ್ಲಿ ಸರ್ಕಾರದ ನಿಲುವು, ಸ್ಥಳೀಯ ಚುನಾವಣೆ ಸೇರಿದಂತೆ ಹಲವು ಸವಾಲು ಫಡ್ನಿವಿಸ್ ಮುಂದಿದೆ.