ಸುಮಲತಾರನ್ನ ಅತಂತ್ರ ಮಾಡಿತಾ ಬಿಜೆಪಿ ಹೈಕಮಾಂಡ್?: ಮತ್ತೆ ರೆಬಲ್ ಲೇಡಿಯ ಸ್ವಾಭಿಮಾನದ ಸ್ಪರ್ಧೆ?

Mar 24, 2024, 12:47 PM IST

ಮಂಡ್ಯ (ಮಾ.24): ಮಂಡ್ಯ, ಕೋಲಾರ & ಹಾಸನ..ಜೆಡಿಎಸ್ ತೆಕ್ಕೆಗೆ 3 ಕ್ಷೇತ್ರಗಳು..! ಮಂಡ್ಯಕ್ಕೆ ಕುಮಾರಸ್ವಾಮಿ..? ಹೇಗಿದೆ ಮೈತ್ರಿ ಲೆಕ್ಕ..? ಸುಮಲತಾ ಅತಂತ್ರ..ಮತ್ತೆ ರೆಬಲ್ ಲೇಡಿಯ ಸ್ವಾಭಿಮಾನದ ಸ್ಪರ್ಧೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್. ಮಂಡ್ಯ 3 ಮಿಸ್ಟರಿ..! ಕರ್ನಾಟಕ ಲೋಕ ಕಣದಲ್ಲಿ ಮೈತ್ರಿ ಮಾಡಿಕೊಂಡಿರೋ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಆಗಿರ್ಲಿಲ್ಲಾ. ತುಂಬಾ ಕುತೂಹಲ ಮೂಡಿಸಿದ್ದ ವಿಚಾರ ಅಂದ್ರೆ ಮಂಡ್ಯಕ್ಕೆ ಯಾರು ಅನ್ನೋದು. ಈಗ ಬಿಜೆಪಿ ಚುನಾವಣಾ ಉಸ್ತುವಾರಿಯಿಂದಲೇ ಇದಕ್ಕೆ ಉತ್ತರ ಸಿಕ್ಕಿದೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು  ಅನ್ನೋ ನಿರ್ಧಾರಕ್ಕೆ ಬರಲಾಗಿದೆ. ಬನ್ನಿ ಹಾಗಾದ್ರೆ ಮಂಡ್ಯದಲ್ಲಿ ಹೇಗಿರಲಿದೆ ಸ್ಪರ್ಧೆ..? ಮೋದಿಗೆ ನನ್ನ ಬೆಂಬಲ ಎಂದಿದ್ದ ಸುಮಲತಾ ಅವರ ಮುಂದಿನ ನಡೆ ಏನು..? 

ಕೋಲಾರದಲ್ಲಿ ಹಾಲಿ ಸಂಸದ ಮುನಿಸ್ವಾಮಿಗೆ ಹೈಕಮಾಂಡ್ ಶಾಕ್ ನೀಡಿದೆ. ಜನತಾದಳಕ್ಕೆ ಕೋಲಾರವನ್ನಬಿಟ್ಟು ಕೊಟ್ಟಿದೆ. ಮುನಿಸ್ವಾಮಿ ಈ ಬಗ್ಗೆ ಏನ್ ಹೇಳ್ತಾರೆ. ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಕೊನೆಗೂ ಇತ್ಯರ್ಥವಾಗಿದೆ. ಜೆಡಿಎಸ್ ನಿರೀಕ್ಷೆಯಂತೆ 3 ಸೀಟು ಬಿಟ್ಟುಕೊಟ್ಟ ಬಿಜೆಪಿ ದೊಡ್ಡ ಗೆಲುವಿನ ಲೆಕ್ಕದಲ್ಲಿದೆ. ಮಂಡ್ಯದಲ್ಲಿ ಸುಮಲತಾ ನಡೆ ಬಗ್ಗೆ ತುಂಬಾನೇ ಕುತೂಹಲಗಳು ಮೂಡಿರೋದು ಒಂದು ಕಡೆ. ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದನ ಬದಲು ದಳಪತಿಗಳಿಗೆ ಕ್ಷೇತ್ರ ನೀಡಲಾಗಿದೆ. ಹೀಗಾಗಿ ಮುನಿಸ್ವಾಮಿ ಅವರ ನಡೆ ಬಗ್ಗೆಯೂ ಕುತೂಹಲ ಮೂಡಿದೆ. ಹಾಸನ ಕೂಡ ನಿರೀಕ್ಷೆಯಂತೆ ಜೆಡಿಎಸ್ ಪಾಲಾಗಿದೆ. ಈ ಬಾರಿಯೂ ಪ್ರಜ್ವಲ್ ರೇವಣ್ಣ ಅವರೇ ನಿಲ್ತಾರಾ..? ಬೇರೆ ಅಭ್ಯರ್ಥಿಯನ್ನ ದಳಪತಿಗಳು ಕಣಕ್ಕಿಳಿಸುತ್ತಾರಾ ಅನ್ನೋ ಚರ್ಚೆಯೂ ಶುರುವಾಗಿದೆ.