ಹರಿದಾಸವರೇಣ್ಯರ ಆರಾಧನಾ ಪುಣ್ಯ ಮಹೋತ್ಸವದಲ್ಲಿ ವಿದ್ವಾನ್‌ RK ಪದ್ಮನಾಭಗೆ ಜೀವಮಾನ ಸಾಧನೆ ಪ್ರಶಸ್ತಿ | Suvarna News

Published : Feb 13, 2025, 08:00 PM IST

ಕಲೆ ಮತ್ತು ಸಂಸ್ಕ್ರತಿ ವಿಭಾಗದಲ್ಲಿ ಕಳೆದ25 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ವತಿಯಿಂದ 25ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಬನಶಂಕರಿ ದೇವಗಿರಿ ವೇಕಟೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾನದ ರಜತ ಮಹೋತ್ಸವ ಮತ್ತು ಹರಿದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಹಾಗೂ ತ್ಯಾಗರಾಜರ ಆರಾಧನಾ ಪುಣ್ಯ ಮಹೋತ್ಸವ ನಡೆಸಲಾಯ್ತು.. ಕಾರ್ಯಕ್ರಮದಲ್ಲಿ ಗಾನ ಕಲಾಭೂಷಣ ವಿದ್ವಾನ್‌ ಡಾ.ಆರ್‌.ಕೆ.ಪದ್ಮನಾಭ ನಿವೃತ್ತ ವೇದಾಂತ ಪ್ರಾಧ್ಯಾಪಕ ವಿದ್ವಾನ್‌ ಜಿ.ಶಿವರಾಂ ಅಗ್ನಿಹೋತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು, ದಿವಂಗತ ಪಿ.ಅನಂತ ಪದ್ಮನಾಭಾಚಾರ್ಯ ಅವರಿಗೆ ಮರಣೋತ್ತರ ವ್ಯಾಸ ಪ್ರಶಸ್ತಿ ಮತ್ತು ವಿದ್ವಾನ್ ಜಿ.ಶಿವರಾಂ ಅಗ್ನಿಹೋತ್ರಿ ಅವರಿಗೆ ಜೀವಮಾನ ವ್ಯಾಸ ಪ್ರಶಸ್ತಿ ಮತ್ತು ಸಂಗೀತ ವಿದ್ವಾನ್ ಅರ್ಚನಾ ಕುಲಕರ್ಣಿ ಅವರಿಗೆ ಗುರುರಾಘವೇಂದ್ರ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಎಲೆಕ್ಟ್ರಾನಿಕ್ಸ್‌ ಅಂಡ್‌ ಇನ್​​​ಸ್ಟ್ರುಮೆಂಟೇಷನ್‌ ಎಂಜಿನಿಯರ್‌ ವಿ.ಎಸ್‌.ವೇದ ಅವರಿಗೆ ಪ್ರತಿಭಾ ಪುರಸ್ಕಾರ ಮತ್ತು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ದೇವರಾತ ಜೋಷಿ ಅವರಿಗೆ ಧ್ರುವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೋಲಾರದ ತಂಬಹಳ್ಳಿ ಮಾಧವತೀರ್ಥ ಮಠದ ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಮತ್ತು ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ, ವಿದ್ವಾಂಸ ಎಸ್‌.ರಂಗನಾಥ್‌, ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ್‌, ಕಾರ್ಯದರ್ಶಿ ನಾಗರಾಜ್‌, ಉಪಾಧ್ಯಕ್ಷೆ ವೀಣಾ ಸುರೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more