Nov 2, 2023, 11:08 PM IST
ಕೆಲಸಕ್ಕೆ ಬಾರದವರು ಸಿಎಂ ಬದಲಾವಣೆ ಮಾತಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸಿಎಂ ನಾನೇ ಎಂದಿದ್ದರು. ಇದರ ಬೆನ್ನಲ್ಲೇ ಸಿದ್ದು ಹೇಳಿಕೆ ವಿರುದ್ದ ಡಿಕೆಶಿ ಬಣದ ನಾಯಕರು ಮತ್ತೆ ಹೇಳಿಕೆ ನೀಡಿ ಮುಜುಗರ ತಂದಿದ್ದಾರೆ. ಸಿದ್ದಾರಮಯ್ಯ ಹೇಳಿಕೆ ಬೆನ್ನಲ್ಲೇ ಶಾಸಕ ಇಕ್ಬಾಲ್ ಹುಸೈನ್ ಇನ್ನು ಒಂದೂವರೆ ವರ್ಷದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿ, ಸಿದ್ದುಗೆ ಟಾಂಗ್ ನೀಡಿದ್ದಾರೆ. ಇದರ ನಡುವೆ 10 ರಿಂದ 12 ಸಚಿವರಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಆಹ್ವಾನ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಬಣದ ಸಚಿವರಿಗೆ ಆಹ್ವಾನ ನೀಡಲಾಗಿದ್ದು, ಶನಿವಾರ ಸಭೆ ನಡೆಯಲಿದೆ.