ಪಾಲಿಕೆಗಳಿಗೆ ಎಲೆಕ್ಷನ್ ಘೋಷಣೆ: ಚುನಾವಣೆ ಆಯೋಗದ ವಿರುದ್ಧ ಈಶ್ವರಪ್ಪ ಅಸಮಾಧಾನ

Aug 11, 2021, 10:07 PM IST

ಬೆಳಗಾವಿ, (ಆ.11): ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ದಿನಾಂಕ ಪ್ರಕಟಿಸಿದೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಇಂದು (ಆ.11) ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೊವಿಡ್- ಕೊವಿಡ್ ಅಂತಾರೆ ಚುನಾವಣೆ ಘೋಷಣೆ ಮಾಡಿಬಿಟ್ಟಿದ್ದಾರೆ. ಇದಂತೂ ನನಗೆ ಆಶ್ಚರ್ಯ ಮೂಡಿಸಿದೆ ಎಂದು  ಈಶ್ವರಪ್ಪ ಚುನಾವಣಾ ಆಯೋಗದ ನಡೆಗೆ ಅಸಮಾಧಾನ  ಹೊರಹಾಕಿದರು. 

ರಾಜ್ಯದ 3 ನಗರ ಪಾಲಿಕೆ ಚುನಾವಣೆಗೆ ಡೇಟ್ ಫಿಕ್ಸ್: ಯಾವಾಗ ವೋಟಿಂಗ್, ಕೌಂಟಿಂಗ್?

ನಾವು ಇವತ್ತು ರಿಪೋರ್ಟ್ ಕೊಡ್ತಾಇದ್ವಿ ಅಷ್ಟರೊಳಗೆ ಚುನಾವಣೆ ಘೋಷಣೆ ಮಾಡಿದ್ದಾರೆ ನಾನೇನು ಹೇಳಲಿ. ಚುನಾವಣೆ ಆಯೋಗ ತೆಗೆದುಕೊಂಡ ಈ ತೀರ್ಮಾನದ ಬಗ್ಗೆ ನನಗಂತೂ ಸಮಾಧಾನ ಇಲ್ಲ. ಬೆಳಗಾವಿ ಮತ್ತು ಕಲಬುರಗಿ ಗಡಿ ಜಿಲ್ಲೆಗಳಾಗಿವೆ. ಸುತ್ತಮುತ್ತ ಹಳ್ಳಿ ಜನರು ನಗರಕ್ಕೆ ಬಂದು ಹೋಗ್ತಿರ್ತಾರೆ. ಇಂತಹ ಸಂದರ್ಭದಲ್ಲಿ ಇವರು ಚುನಾವಣೆ ಮಾಡಿಕೊಂಡು ಕುಳಿತುಕೊಳ್ಳುತ್ತೇನೆ ಅಂದರೆ ಹೇಗೆ? ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಎಂದು ಪ್ರಧಾನಮಂತ್ರಿಗಳು ಹೇಳುತ್ತಿದ್ದಾರೆ. ಕೋರ್ಟ್‌ಗಳು ಸಹ ಹೀಗೆ ಹೇಳುತ್ತಿವೆ. ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರಿಗೆ ಕೇಳೋಣ ಎಂದು ಬೇಸರ ವ್ಯಕ್ತಪಡಿಸಿದರು.