ಪಕ್ಷ ತೊರೆದವರಿಗೆ ಮರಳಿ ಬರಲು ಡಿಕೆಶಿ ಆಹ್ವಾನ, ಕಾಂಗ್ರೆಸ್‌ನಲ್ಲಿ ಒಡಕು, ಬಿಜೆಪಿಗೆ ತೊಡಕು!

Nov 2, 2022, 11:01 PM IST

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚಿಸಿದ ಮೂಲ ಕಾಂಗ್ರೆಸ್ ನಾಯಕರು ಮತ್ತೆ ಪಕ್ಷಕ್ಕೆ ವಾಪಸ್ ಬರುವಂತೆ ಆಹ್ವಾನ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಆಹ್ವಾನ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಸರ್ಕಾರ ಬೀಳಿಸಿ ಬಿಜೆಪಿ ಸೇರಿಕೊಂಡ ನಾಯಕರನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳಲು ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ಡಿಕೆ ಶಿವಕುಮಾರ್ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ಡಿಕೆಶಿ ಹಾಗೂ ಸಿದ್ದು ನಡುವಿನ ಮೈಮನಸ್ಸಿಗೆ ಮತ್ತೊಂದು ವೇದಿಕೆ ಸಿದ್ದವಾಗಿದೆ. ಇತ್ತ ಡಿಕೆಶಿ ಆಹ್ವಾನ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ನಾಯಕರು ಪಕ್ಷ ತೊರೆದರೆ ಅನ್ನೋ ಆತಂಕವೂ ಮನೆ ಮಾಡಿದೆ.