Jan 12, 2022, 12:26 PM IST
ಬೆಂಗಳೂರು (ಜ. 12): 'ನಮ್ಮ ನೀರು ನಮ್ಮ ನಮ್ಮ ಹಕ್ಕು' (Walk For Water) ಘೋಷವಾಕ್ಯದೊಂದಿಗೆ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು (Mekedatu) ಪಾದಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಡಿಕೆಶಿ (DK Shivakumar) ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಶಕ್ತಿ ಪ್ರದರ್ಶಿಸಿದರು.
News Hour: ಮೇಕೆದಾಟು ಯಾತ್ರೆ ಮೇಲೆ ಕಾನೂನು ಪ್ರಹಾರ, ಜಿಲ್ಲೆಗಳಲ್ಲೂ ಕೊರೊನಾ ಸ್ಪೋಟ
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ಡಿಕೆಶಿ ಮೇಕೆದಾಟು ಯೋಜನೆ ಜಾರಿಗೆ ಅಖಾಡಕ್ಕಿಳಿದಿದ್ದರು. ಪರಿಷ್ಟೃತ ಡಿಪಿಆರ್‌ನ್ನು ಕೇಂದ್ರ ನೀರಾವರಿ ಆಯೋಗಕ್ಕೆ ಸಲ್ಲಿಸಿದ್ದರು. ಈಗ ಬೇಕಾಗಿರುವುದು ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ. ಒಪ್ಪಿಗೆ ನೀಡಿದ ಕೂಡಲೇ ಮೇಕೆದಾಟು ಯೋಜನೆ ಶುರುವಾಗುತ್ತದೆ. ಅದಕ್ಕಾಗಿ ಡಿಕೆಶಿ ಪಾದಯಾತ್ರೆ ತಂತ್ರ ರೂಪಿಸಿದ್ದಾರೆ. ಹಾಗಾದರೆ ಡಿಕೆಶಿ ಮೇಕೆದಾಟು ಪಟ್ಟು ಹಿಡಿದಿದ್ಯಾಕೆ..? ಇದರಿಂದ ಆಗುವ ಲಾಭ ಯಾರಿಗೆ..?