Aug 6, 2022, 1:48 PM IST
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಿರಂತರ ಚರ್ಚೆಯಲ್ಲಿದೆ. ಕೆಲವು ಸಲ ನೆಗೆಟಿವ್ ಕಾರಣಕ್ಕೆ, ಕೆಲವು ಸಲ ಪಾಸಿಟಿವ್ ಕಾರಣಕ್ಕೆ ಚರ್ಚೆಯಲ್ಲಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಡಿಕೆಶಿ, ಸಿದ್ದರಾಮಯ್ಯನವರನ್ನು ಆಲಿಂಗಿಸಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಇದು ಕಾಂಗ್ರೆಸ್‌ನ ಇನ್ನೊಂದು ದಿಕ್ಕಿಗೆ ಕೊಂಡೊಯ್ಯುತ್ತಿದೆ ಎನ್ನಲಾಗುತ್ತಿದೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ತಯಾರಿ..? ಸಿದ್ದರಾಮೋತ್ಸವದ ಸಂದೇಶವೇನು..? ಕಾಂಗ್ರೆಸ್ ಸ್ಟ್ರಾಟೆಜಿ ಏನು..? ಇವೆಲ್ಲದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.