Dec 15, 2020, 12:00 PM IST
ಬೆಂಗಳೂರು (ಡಿ. 15): ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಕಡೆಗೂ ಮುಕ್ತಾಯಗೊಂಡಿದೆ. ಸತತ 5 ದಿನಗಳ ನಂತರ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಹೋರಾಟಕ್ಕೆ ಧುಮುಕಿದ್ದು, ಸಾಕಷ್ಟು ಹೈಡ್ರಾಮಕ್ಕೆ ಕಾರಣವಾಯ್ತು. ಮೊದಲು ಸರ್ಕಾರದ ಮಾತಿಗೆ ಒಪ್ಪಿದ್ದ ಸಾರಿಗೆ ನೌಕರರು, ಇದ್ದಕ್ಕಿದ್ದ ಹಾಗೆ ಯೂ ಟರ್ನ್ ಹೊಡೆದಿದ್ದಾರೆ. ಇವರ ಹಿಂದಿರುವ ಕೈ ಕೋಡಿಹಳ್ಳಿ ಚಂದ್ರಶೇಖರ್ ಹೆಸರು ಕೇಳಿ ಬಂದಿದೆ.
ಸಾರಿಗೆ ಮುಷ್ಕರ ಅಂತ್ಯವಾಗಲು ನಿಜವಾದ ಕಾರಣ ಏನು? ಆ ಒಂದು ಬೇಡಿಕೆ!
ಸಾರಿಗೆ ಸಮರದಲ್ಲಿ ಕೋಡಿಹಳ್ಳಿ ಹಾಗೂ ಸವದಿ ನಡುವಿನ ಪ್ರತಿಷ್ಠೆ ಎದ್ದು ಕಾಣುತ್ತಿತ್ತು. ಇಬ್ಬರ ನಡುವಿನ ಪ್ರತಿಷ್ಠೆಯಿಂದಾಗಿ ಸುಲಭವಾಗಿ ಬಗೆಹರಿಯುತ್ತಿದ್ದ ಮುಷ್ಕರ 5 ದಿನಗಳ ಕಾಲ ನಡೆಯುವಂತಾಯಿತು. ಹಾಗಾದರೆ ಕೋಡಿಹಳ್ಳಿಗೂ, ಈ ಸಮರಕ್ಕೂ ಏನ್ ಸಂಬಂಧ? ಏನಿವರ ಹಿಡನ್ ಅಜೆಂಡಾ? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್...!