ಪಾತ್ರಧಾರಿಗಳ ಹಿಂದಿದ್ದಾರಾ ಆ "ರಿಯಲ್" ಸೂತ್ರಧಾರ..? ಡಿಕೆಗೆ ದಿಗ್ಬಂಧನ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..?

Jan 7, 2024, 2:31 PM IST

ಕನಕಪುರದ ರಣಬೇಟೆಗಾರ ಡಿಕೆ ಶಿವಕುಮಾರ್ ರಾಜಕೀಯ ಚದುರಂಗದಾಟಲ್ಲಿ ಚತುರ ಚಾಣಾಕ್ಷ. ಯಾವಾಗ ಯಾವ ದಾಳ ಉರುಳಿಸ್ಬೇಕು, ಯಾವ ದಾಳ ಉರುಳಿಸಿದ್ರೆ ಯಾರ ಸಾಮ್ರಾಜ್ಯವನ್ನು ಅಲ್ಲಾಡಿಸ್ಬಹ್ದು ಅನ್ನೋದನ್ನು ಸ್ಪಷ್ಟವಾಗಿ ಅರಿತಿರೋ ಚದುರಂಗದ ಪಂಟರ್ ಡಿಕೆ ಶಿವಕುಮಾರ್(DK shivakumar). ಚದುರಂಗದಲ್ಲಿ ಚತುರತೆ ಇಲ್ದೇ ಹೋಗಿದ್ರೆ, ದೇವೇಗೌಡ್ರ(HD Devegowda) ವಿರುದ್ಧ ತೊಡೆ ತಟ್ಟಿ ನಿಲ್ಲೋದಕ್ಕೆ ಆಗ್ತಿತ್ತಾ. ರಾಜಕಾರಣದಲ್ಲಿ ನಾನು ಫುಟ್ಬಾಲ್ ಆಡಲ್ಲ, ಚೆಸ್ ಗೇಮ್ ಆಡ್ತೀನಿ ಅಂತ ಡಿಕೆ ಶಿವಕುಮಾರ್ ಸಾಕಷ್ಟು ಬಾರಿ ಹೇಳಿದ್ದಾರೆ. ಇಂಥಾ ಚೆಸ್ ಗೇಮ್‌ಗಳನ್ನು ಆಡಿಯೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಪಟ್ಟ, ಉಪಮುಖ್ಯಮಂತ್ರಿ ಪಟ್ಟವನ್ನು ದಕ್ಕಿಸಿಕೊಂಡದ್ದು. ಸಿದ್ದರಾಮಯ್ಯ(Siddaramaiah)ಬಣಕ್ಕೆ ಟಕ್ಕರ್ ಕೊಡ್ತಾ ರಾಜಕೀಯ ಪಟ್ಟುಗಳನ್ನು ಹಾಕ್ತಾ ಬಂದದ್ದು. ಅಂಥಾ ಚದುರಂಗದ ಚತುರನಿಗೇ ಚೆಕ್ ಮೇಟ್ ಇಡಲು ಸಿದ್ದರಾಮಯ್ಯ ಬಣ ಮುಂದಾಯ್ತಾ..? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ, ಸಿದ್ದು ಸೇನೆಯ ಪ್ರಭಾವಿ ಮಂತ್ರಿಯೊಬ್ಬರ ರೋಚಕ ವರಸೆ. ಸಿದ್ದರಾಮಯ್ಯನವರ ಆಪ್ತ ಸಚಿವ ಕೆ.ಎನ್ ರಾಜಣ್ಣ(KN Rajanna) ಮತ್ತೆ ತ್ರಿವಳಿ ಡಿಸಿಎಂ ಪಟ್ಟು ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಈಗಿರೋ ಒಂಟಿ ಡಿಸಿಎಂ ಸಾಕಾಗಲ್ಲ, ಇನ್ನೂ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡ್ಬೇಕು ಅಂತ ತಮ್ಮ ಹಳೇ ವರಸೆಯನ್ನು ಮತ್ತೆ ತೋರಿಸಿದ್ದಾರೆ ರಾಜಣ್ಣ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಮನೆಯಲ್ಲಿ ಕಾಂಗ್ರೆಸ್‌ನ ಒಂದಷ್ಟು ಪ್ರಭಾವಿ ಮಂತ್ರಿಗಳು ಗುರುವಾರ ರಾತ್ರಿ ಸಭೆ ನಡೆಸಿದ ಬೆನ್ನಲ್ಲೇ ಸಚಿವ ರಾಜಣ್ಣ ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  Hassan Murder: ತಾಯಿ, ಮಕ್ಕಳದ್ದು ಆತ್ಮಹತ್ಯೆಯಲ್ಲ, ಕೊಲೆ! ತನಿಖೆಯಲ್ಲಿ ಬಯಲಾಯ್ತು ರೀಲ್ಸ್‌ ಪ್ರೇಮಿ ಲವ್‌ ಕಹಾನಿ