Apr 6, 2023, 12:51 PM IST
ಕರ್ನಾಟಕ ಕುರುಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಿಕ್ತು ಕಿಚ್ಚನ ಬಲ..! ಬಿಜೆಪಿಗೆ ಸುದೀಪ್ ಸ್ಟಾರ್ ಕ್ಯಾಂಪೇನರ್.. ರಣಕಣದಲ್ಲಿ ಸಿಎಂ ಮೆಗಾ ಸ್ಟ್ರೋಕ್..! ಬೊಮ್ಮಾಯಿ ಪರ ಬ್ಯಾಟ್ ಬೀಸೋದಕ್ಕೆ ಮುಂದಾಗಿದ್ದೇಕೆ ವೀರ ಮದಕರಿ..? ಈ ನಿರ್ಧಾರದ ಹಿಂದಿದೆ ಕಿಚ್ಚನ ಮೈ ಆಟೋಗ್ರಾಫ್ ಸ್ಟೋರಿ.. ಪೈಲ್ವಾನನ ಎಂಟ್ರಿಯಿಂದ ಬಿಜೆಪಿಗೆ ಸಿಗಲಿರೋ ಲಾಭ ಎಂಥದ್ದು..? ಅಖಾಡಕ್ಕೆ ಅಭಿನಯ ಚಕ್ರವರ್ತಿ.. ಬದಲಾಗುತ್ತಾ ಮತಗಣಿತ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬೊಮ್ಮಾಯಿಗೆ ಬಾದ್’ಷಾ ಬಲ.
ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತ ಕಾರಣಕ್ಕೆ ಬೊಮ್ಮಾಯಿ ಪರ ನಿಲ್ಲೋದಾಗಿ ಕಿಚ್ಚ ಸುದೀಪ್ ಹೇಳ್ತಿದ್ದಾರೆ. ಹಾಗಾದ್ರೆ ಬೇರೆ ಪಕ್ಷದವರು ಸುದೀಪ್ ಕಷ್ಟ ಕಾಲದಲ್ಲಿ ಜೊತೆಗೆ ನಿಂತಿಲ್ವಾ..? ಅವ್ರ ಪರವೂ ಕಿಚ್ಚ ಪ್ರಚಾರ ನಡೆಸ್ತಾರಾ..? ಈ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆ ಏನು..? ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಕಾರಣ ಸಿಎಂ ಬೊಮ್ಮಾಯಿಯವರ ಮೇಲಿನ ಅಭಿಮಾನ. ಕಷ್ಟಕಾಲದಲ್ಲಿ ನನ್ನ ಜೊತೆ ನಿಂತ ಕಾರಣಕ್ಕೆ ಬೊಮ್ಮಾಯಿ ಪರ ನಿಲ್ಲೋದಾಗಿ ಸುದೀಪ್ ಹೇಳ್ತಿದ್ದಾರೆ. ಹಾಗಾದ್ರೆ ಬೇರೆ ಪಕ್ಷದವರು ಸುದೀಪ್ ಕಷ್ಟ ಕಾಲದಲ್ಲಿ ಜೊತೆಗೆ ನಿಂತಿಲ್ವಾ..? ಅವ್ರ ಪರವೂ ಕಿಚ್ಚ ಪ್ರಚಾರ ನಡೆಸ್ತಾರಾ..? ಈ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆ ಏನು..?
ನಟ ಕಿಚ್ಚ ಸುದೀಪ್ ಅವ್ರು ಬಿಜೆಪಿ ಪರ ಪ್ರಚಾರ ನಡೆಸಲು ಮುಂದಾಗಿರೋ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ದಳಪತಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು..? ಕರ್ನಾಟಕ ಕುರುಕ್ಷೇತ್ರದಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಕಿಚ್ಚನ ಬೆಂಬಲ ಕೇಸರಿ ಪಕ್ಷಕ್ಕೆ. ನಟ ಸುದೀಪ್ ಬಿಜೆಪಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ,. ಹಾಗಾದ್ರೆ ಇದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ದಳಪತಿ ಎಚ್.ಡಿ ಕುಮಾರಸ್ವಾಮಿ ಏನ್ ಹೇಳ್ತಾರೆ..? ರಾಜ್ಯದಲ್ಲಿ ಮೊದಲ ಬಾರಿ ಬಹುಮತ ಪಡೆಯುವ ಬಿಜೆಪಿ ಕನಸಿಗೆ ಕಿಚ್ಚನ ಬಲ ಶಕ್ತಿ ತುಂಬುತ್ತಾ..? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಒಂದು ತಿಂಗಳು ಕಾಯಲೇಬೇಕು.