
ಜಮೀನು, ತಾಂಡ, ದೇವಸ್ಥಾನ. ಊರಿಗೆ ಊರೇ ತನ್ನದು ಅಂತಿದೆ ವಕ್ಫ್ ಬೋರ್ಡ್. ಈ ವಕ್ಫ್ ಭೂದಾಹಕ್ಕೆ ಮೂಗುದಾರ ಹಾಕುತ್ತಾ ಸಿಎಂ ಕೊಟ್ಟಿರೋ ಖಡಕ್ ಸೂಚನೆ? ಮುಖ್ಯಮಂತ್ರಿಗಳ ನಿರ್ಧಾರ ಬೀಸೋ ದೊಣ್ಣೆಯಿಂದ ಪಾರಾದ ಹಾಗೆ ಅಷ್ಟೇನಾ? ಹಾಗಾದ್ರೆ ವಕ್ಫ್ ಆರ್ಭಟಕ್ಕೆ ಶಾಶ್ವತ ಪರಿಹಾರ ಏನು? ಅದರ ಕಂಪ್ಲೀಟ್ ಸ್ಟೋರಿ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ವಕ್ಫ್ ಗಾಯಕ್ಕೆ ಮಧ್ಯಂತರ ಮುಲಾಮು
ಒಂದು ಕಡೆ ವಕ್ಫ್ ಆರ್ಭಟ.. ಇನ್ನೊಂದು ಕಡೆ ಸರ್ಕಾರದ ಅಭಯ. ಮತ್ತೊಂದು ಕಡೆ ಕೇಂದ್ರ ಸರ್ಕಾರದಲ್ಲಿ ಮಹತ್ತರ ನಿರ್ಣಯವೊಂದರ ಕೌತುಕ. ಇದೆಲ್ಲದರ ನಡುವೆ, ಭುಗಿಲೆದ್ದಿರೋ ಸಮಸ್ಯೆಗೆ ಪರಿಹಾರ ಏನು? ಅದಕ್ಕೆ ಉತ್ತರ ಹುಡುಕೊ ಪ್ರಯತ್ನ, ಇಲ್ಲಿದೆ ನೋಡಿ