ಸಿದ್ದರಾಮಯ್ಯನವರ 'ತಾಲಿಬಾನಿ' ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಆರ್‌ಎಸ್‌ಎಸ್‌ನ್ನೂ ತಾಲಿಬಾನ್ ಎಂದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಸೆ. 29): ಸಿದ್ದರಾಮಯ್ಯನವರ 'ತಾಲಿಬಾನಿ' ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಆರ್‌ಎಸ್‌ಎಸ್‌ನ್ನೂ ತಾಲಿಬಾನ್ ಎಂದಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
'ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮನುಷ್ಯತ್ವ ಇಲ್ಲದವರು, ರಾಕ್ಷಸೀ ಪ್ರವೃತ್ತಿ ಇರುವವರು ಅದಕ್ಕೆ ಅವರನ್ನು ತಾಲಿಬಾನ್‌ಗಳು ಎಂದಿದ್ದೇನೆ. ಹಿಟ್ಲರ್ ವಂಶಸ್ಥರು ಎಂದೂ ಅವರನ್ನೂ ಕರೆಯಬಹುದು' ಎಂದಿದ್ಧಾರೆ. ಇದಕ್ಕೆ ಬಿಜೆಪಿ ನಾಯಕರು ಪ್ರತ್ಯುತ್ತರ ನೀಡಿದ್ದಾರೆ.