ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು?

ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು?

Published : Nov 18, 2025, 06:48 PM IST
ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ, ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಖರ್ಗೆಯವರು ಡಿಕೆಶಿಗೆ ನೀಡಿರಬಹುದಾದ ಮೂರು ಸಂಭಾವ್ಯ ಆಯ್ಕೆಗಳ ಬಗ್ಗೆ ವಿಶ್ಲೇಷಿಸಲಾಗಿದೆ.

ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ ಅಂತಿದ್ದಾರೆ ಡಿ.ಕೆ.ಶಿವಕುಮಾರ್. ಹೀಗಿದ್ರೂ ಇದು ಸಹ ಡಿಕೆಶಿಯ ತೆರೆ ಹಿಂದಿನ ಆಟ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಇಬ್ಬರು ಒಂದಾಗಿ ಮಲ್ಲಿಕಾರ್ಜುನ ಖರ್ಗೆಯರವನ್ನ ಭೇಟಿಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷರು, ಬಂಡೆ ಬ್ರದರ್ಸ್​ಗೆ ಏನೆಲ್ಲಾ ಸಂದೇಶಗಳನ್ನ ಕೊಟ್ಟಿರ್ಬೋದು ಅನ್ನೋ ವಿಚಾರವಾಗಿ ಒಂದಿಷ್ಟು ವಿಶ್ಲೇಷಣೆಗಳನ್ನ ಮಾಡಲಾಗ್ತಿದೆ. ಖರ್ಗೆ ಜೊತೆಗಿನ ಸಭೆಯಲ್ಲಿ ನಾಯಕತ್ವ ವಿಚಾರವಾಗಿ ಚರ್ಚೆಯಾಗಿದ್ದೇ ಆದಲ್ಲಿ ಮೂರು ಆಯ್ಕೆಗಳನ್ನ ಡಿಕೆ ಮುಂದಿಟ್ಟಿರಬಹುದು ಮಲ್ಲಿಕಾರ್ಜುನ ಖರ್ಗೆ. ಮೊದಲನೆಯಾದಾಗಿ, ಎರಡುವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಡಿಕೆಗೆ ಸಿಂಹಾಸನ ಬಿಟ್ಟು ಕೊಡ್ಬೇಕು ಅಂತ ಒಪ್ಪಂದ ಆಗಿದ್ದೇ ಆದಲ್ಲಿ, ಆ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೂ ಮನಸ್ಸಿದ್ದಲ್ಲಿ, ಡಿಕೆಗೆ ಸಿಂಹಾಸನ ಸಿಗುವ ಭರವಸೆಯನ್ನ ಕೊಟ್ಟಿ ಕಳುಹಿಸಿರಬಹುದು.. ಇಲ್ಲದೇ ಹೋದ್ರೆ, ತಾಳ್ಮೆಯಿಂದಿರಿ ಎನ್ನುವ ಸಂದೇಶವನ್ನೂ ತಲುಪಿಸಿರಬಹುದು. ಸಿದ್ದರಾಮಯ್ಯ ಅವರಿಗೆ ದೇವರಾಜ್ ಅರಸು ಅವರ ದಾಖಲೆ ಮುರಿಬೇಕು ಅನ್ನೋ ಆಸೆಯಿದೆ. ಹೋಗಾಗಿ ಅಲ್ಲಿಯ ತನಕ ತಾಳ್ಮೆಯಿಂದಿರಿ. ಅದಾದ ಮೇಲೆ ಬೇಕಾದ್ರೂ ಸಿಎಂ ಸಿಂಹಾಸನದ ಬಗ್ಗೆ ಮತ್ತೆ ಚರ್ಚೆ ಮಾಡೋಣ ಅನ್ನೋ ಭರವಸೆಯನ್ನೂ ಮಲ್ಲಿಕಾರ್ಜುನ ಖರ್ಗೆಯವರು ಡಿಕೆ ಕೊಟ್ಟಿರಬಹುದು.

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more