ದಿಲ್ಲಿಯಲ್ಲಿ ಸಿದ್ದು, ಬೆಂಗಳೂರಲ್ಲಿ ಡಿಕೆಶಿ, ಸಿಎಂ ಸ್ಥಾನಕ್ಕೆ ಹೆಚ್ಚಾಯ್ತು ಜಟಾಪಟಿ!

May 15, 2023, 11:14 PM IST

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಪಟ್ಟು ಜೋರಾಗುತ್ತಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಇಬ್ಬರು ನಾಯಕರು ತಂತ್ರ ಬಿಗಿಗೊಳಿಸಿದ್ದಾರೆ. ಸಿದ್ದು ದಿಲ್ಲಿಯಲ್ಲಿ ಕುಳಿತರೆ, ಡಿಕೆಶಿ ಬೆಂಗಳೂರಿನಲ್ಲಿ ಕುಳಿತೇ ಕುರ್ಚಿಗಾಗಿ ತಂತ್ರ ಹಣೆದಿದ್ದಾರೆ.ಸಿಎಂ ಆಯ್ಕೆ ಕಸರತ್ತು ದೆಹಲಿಯಲ್ಲಿ ನಡೆಯುತ್ತಿದೆ. ಇದರ ಬೆನ್ನಲ್ಲೇ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದರೂ, ಡಿಕೆ ಶಿವಕುಮಾರ್ ಮಾತ್ರ ದೆಹಲಿಗೆ ತೆರಳಿಲ್ಲ. ಸಿಎಂ ಮಾಡುದಾದರೆ ಮಾತ್ರ ದೆಹಲಿಗೆ ಬರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದು ಆಪ್ತರು ಬ್ಯಾಟಿಂಗ್ ಆರಂಭಿಸಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿದ್ದರಾಮಯ್ಯ ಆಪ್ತರು ಇದೀಗ ಹೈಕಮಾಂಡ್ ಮುಂದೆಯೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.ಡಿಕೆ ಶಿವಕುಮಾರ್ ಸಿಎಂ ಮಾಡಲೇಬೇಕು ಎಂದು ಒಕ್ಕಲಿಗರದ ಸಂಘ ಒತ್ತಾಯಿಸಿದೆ. ಇಂದು ಸಭೆ ಸೇರಿದ ಒಕ್ಕಲಿಗರ ಸಂಘ ಬೃಹತ್ ರ್ಯಾಲಿ ಕೈಗೊಳ್ಳಲು ಪ್ಲಾನ್ ಮಾಡಿದೆ.