ನಮ್ದೇ ಸರ್ಕಾರ, ನಾನೇ ಸಿಎಂ, ಮೈತ್ರಿಗೆ 9 ಕಂಡೀಷನ್ ಹಾಕಿದ ಹೆಚ್‌ಡಿಕೆ!

May 12, 2023, 10:58 PM IST

ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಅತಂತ್ರ ಅನ್ನೋ ಸೂಚನೆ ಸಿಗುತ್ತಿದೆ. ಇದರ ಬೆನ್ನಲ್ಲೇ ಮೈತ್ರಿ ಮಾತು ಜೋರಾಗುತ್ತಿದೆ. ಮತದಾನದ ಬೆನ್ನಲ್ಲೇ ಸಿಂಗಾಪುರಕ್ಕೆ ಹಾರಿದ್ದ ಕುಮಾರಸ್ವಾಮಿ, ಇದೀಗ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರವಿರಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಮೊದಲ ಕಂಡೀಷನ್ ಹಾಕಿದ್ದಾರೆ. ಈ ಮೂಲಕ ನಾನೇ ಸಿಎಂ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ಇನ್ನೂ 9 ಕಂಡೀಷನ್ ಹಾಕಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಗೆ ಡಿಕೆ ಶಿವಕುಮಾರ್ ಮಹತ್ವದ ಸೂಚನೆ ನೀಡಿದ್ದಾರೆ. ಮತ ಎಣಿಕೆಯಲ್ಲಿ ಲೀಡ್ ಬರುತ್ತಿದ್ದಂತೆ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ. ತಾವು ಹೇಳಿದ ಸ್ಥಳಕ್ಕೆ ಬಂದು ಸೇರಲು ಸೂಚಿಸಲಾಗಿದೆ. ಪಕ್ಷದ ಗೆಲುವಿನ ಅಭ್ಯರ್ಥಿಗಳನ್ನು ಯಾರು ಸೆಳೆಯದಂತೆ ನೋಡಿಕೊಳ್ಳಲು ಪ್ಲಾನ್ ಮಾಡಲಾಗಿದೆ.