ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಬಿಜೆಪಿ ಸೋಲಿಗೆ ಕಾರಣಗಳನ್ನು ಹುಡುಕುತ್ತಿದೆ.
ಬೆಂಗಳೂರು(ಮೇ.13) ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, 40 ಪರ್ಸೆಂಟ್ ಕಮಿಷನ್, ನಾಯಕತ್ವದ ಕೊರತೆ, ಲಿಂಗಾಯಿತ ನಾಯಕರ ಕಡೆಗಣನೆ, ಟಿಕೆಟ್ ಘೋಷಣೆಯಲ್ಲಿ ನಡೆದ ರಾಜಕೀಯ, ಬಿಜೆಪಿ ಪಕ್ಷದೊಳಗಿನ ಆತಂರಿಕ ಕಚ್ಚಾಟ ಸೇರಿದಂತೆ ಹಲವು ಕಾರಣಗಳಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ. ಕೇವಲ ಮೋದಿ ಹೆಸರಲ್ಲಿ ಚುನಾವಣೆ ಗೆಲ್ಲಬಹುದು ಅನ್ನೋ ರಾಜ್ಯ ಬಿಜೆಪಿ ನಾಯಕರಿಗೆ ತಕ್ಕ ಪಾಠವನ್ನು ಮತದಾರ ಕಲಿಸಿದ್ದಾರೆ. ಕಾಂಗ್ರೆಸ್ ಸುನಾಮಿಯಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ. 136 ಸ್ಥಾನ ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವಿನೊಂದಿಗೆ ಕಾಂಗ್ರೆಸ್ ಗದ್ದುಗೆ ಏರಿದೆ. ಬಿಜಿಪಿ ಸೋಲು, ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು? ಚುನಾವಣಾ ಫಲಿತಾಂಶದ ಸಂಪೂರ್ಣ ಮಾಹಿತಿ ಇಲ್ಲಿದೆ.