May 11, 2023, 11:13 PM IST
ಮತಗಟ್ಟೆಗಳ ಸಮೀಕ್ಷೆ ಹೊರಬಂದ ಬಳಿಕ ಸರಾಸರಿಯಲ್ಲೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸೂಚನೆ ನೀಡುತ್ತಿದೆ.ಬಹುತೇಕ ಮತಗಟ್ಟೆ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆ ಕಾಣಿಸುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ. ಬಹುಮತಕ್ಕೆ ಕೆಲ ಸ್ಥಾನ ಕಡಿಮೆಯಾದರೆ ಮುಂದೇನು? ಈ ಕುರಿತು ಸರಣಿ ಸಭೆ ನಡೆಸಲಾಗುತ್ತಿದೆ.ಜೂಮ್ ಮೀಟಿಂಗ್ ಮೂಲಕ ನಾಯಕರ ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ. ಇತ್ತ ಬಿಜೆಪಿ ಕೂಡ ಪ್ಲಾನ್ ಬಿಗೆ ರೆಡಿಯಾಗಿದೆ. ಚುನಾವಣೆ ಬಳಿಕ ಪ್ರಕಟಗೊಂಡಿರುವ ಮತಗಟ್ಟೆ ಸಮೀಕ್ಷೆ ಕಾಂಗ್ರೆಸ್ ಉತ್ಸಾಹ ಇಮ್ಮಡಿಗೊಳಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಡಾ.ಜಿ ಪರಮೇಶ್ವರ್ ಸಿಎಂ ಆಸೆಯನ್ನೂ ಬಿಚ್ಚಿಟ್ಟಿದ್ದಾರೆ.