Apr 26, 2023, 3:41 PM IST
ವಿಧಾನಸಭಾ ಚುನಾವಣೆಯಲ್ಲಿ ಬಂಡಾಯದ ಬಿರುಗಾಳಿ ಹೆಚ್ಚು ಸದ್ದು ಮಾಡುತ್ತಿರುವುದು ಕರಾವಳಿಯ ಪುತ್ತೂರಿನಲ್ಲಿ. ಪುತ್ತೂರು ಅಂದರೆ ಕರಾವಳಿಯಲ್ಲಿ ಆರೆಸ್ಸೆಸ್ಸ್‌ನ ಮೂಲ ನೆಲ. ಹಿಂದುತ್ವದ ಸ್ಟ್ರಾಂಗ್ ಬೆಲ್ಟ್. ಅಭ್ಯರ್ಥಿಗಳ ಘೋಷಣೆಯಾಗುವರೆಗೆ ಪುತ್ತೂರಿನಲ್ಲಿ ಮತ್ತೆ ಕೇಸರಿ ಪತಾಕೆ ಹಾರೋದು ಗ್ಯಾರಂಟಿ ಎನ್ನಲಾಗುತ್ತಿತ್ತು. ಯಾಕಂದರೆ ಅದು ಬಿಜೆಪಿಯ ಭದ್ರಕೋಟೆ. ಆದರೆ ರಿಯಾಲಿಟಿ ಹಾಗಿಲ್ಲ .ಕೇಸರಿ ಕಲಿ ಹೆಜ್ಜೆ ಹೆಜ್ಜೆಗೂ ಬಿಜೆಪಿಗರ ಬೆವರಳಿಸುತ್ತಿದ್ದಾರೆ ಅರುಣ್ ಪುತ್ತಿಲ. ಅರುಣ್ ಪುತ್ತೂರು ಪರಿಸರದಲ್ಲಿ ತುಂಬಾ ಚಿರಪರಿಚಿತ. ಅದರಲ್ಲೂ ಹಿಂದುತ್ವವನ್ನು ಉಸಿರಾಡುವ ಯುವಕರ ಪಾಲಿಗೆ ಇವರು ಮೆಚ್ಚಿನರು. ಹಿಂದುತ್ವವಾದಿ ಅರುಣ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಟಿಕೆಟ್ ಸಿಕ್ಕೇ ಸಿಗತ್ತೆ ಅನ್ನೋ ನಂಬಿಕೆಯಲ್ಲಿ ಕಳೆದೆರಡು ವರ್ಷಗಳಿಂದ ಕ್ಷೇತ್ರದ ತುಂಬೆಲ್ಲಾ ಓಡಾಡ್ತಾ, ಜನರನ್ನು ಸಂಘಟಿಸ್ತಾ ಚುನಾವಣೆಯಲ್ಲಿ ಸ್ಪರ್ಧೆಗೆ ವೇದಿಕೆ ರೆಡಿ ಮಾಡಿಕೊಂಡಿದ್ರು. ಆದ್ರೆ ಪುತ್ತೂರಿನಲ್ಲಿ ಬಿಜೆಪಿ ಟಿಕೆಟ್ ಆಶಾ ತಿಮ್ಮಪ್ಪ ಗೌಡ ಪಾಲಾಗಿದೆ. ಇದ್ರಿಂದ ರೊಚ್ಚಿಗೆದ್ದಿರೋ ಅರುಣ್ ಪುತ್ತಿಲ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.