Feb 8, 2023, 10:43 PM IST
ಹೆಚ್‌ಡಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆಯಿಂದ ಕೆರಳಿರುವ ಸಮುದಾಯ ತೀವ್ರವಾಗಿ ಆಕ್ರೋಶ ಹೊರಹಾಕುತ್ತಿದೆ. ಗೋಕರ್ಣದ ಆತ್ಮಲಿಂಗ ದರ್ಶನ ಮಾಡಿದ ಕುಮಾರಸ್ವಾಮಿಗೆ ಅಲ್ಲಿನ ಅರ್ಚಕರು ತರಾಟೆಗೆ ತೆಗೆದುಕೊಂಡಿದ್ದರು. ಹೆಚ್‌ಡಿಕೆ ಬ್ರಾಹ್ಮಣ ವಿರೋಧಿ ನಿಲುವ ತಳೆದಿದ್ದಾರೆ ಎಂದು ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯಕ್ಕೆ ಜೆಡಿಎಸ್, ಹಾಗೂ ತಮ್ಮ ಕುಟುಂಬದ ನೆರವನ್ನು ನೆನಪಿಸಿ, ಸ್ಪಷ್ಟೀಕರಣ ನೀಡಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಸಂಕಷ್ಟ ಮತ್ತೆ ಡಬಲ್ ಆಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ವಿರುದ್ದ ಚಾರ್ಜ್‌ಶೀಟ್ ಹಾಕಲು ಸಿಬಿಐ ಸಜ್ಜಾಗಿದೆ. ಇದರ ಬೆನ್ನಲ್ಲೇ ಸಿಬಿಐ ನೋಟಿಸ್ ನೀಡಿದೆ. ಇದೇ ಪ್ರಕರಣದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಗೂ ಸಿಬಿಐ ನೋಟಿಸ್ ನೀಡಿದೆ. ನ್ಯಾಷನಲ್ ಎಜುಕೇಶನ್ ಫೌಂಡೇಶನ್ ನಡೆಸುವ ಐಶ್ವರ್ಯ ಆದಾಯದಲ್ಲೂ ಲೆಕ್ಕ ಸಿಗದ ಕಾರಣ ನೋಟಿಸ್ ನೀಡಲಾಗಿದೆ. ಇಂದಿನ ಇಡೀ ದಿನದ ಪ್ರಮುಖ ಸುದ್ದಿಗಳ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.