
ಬುದ್ಧನ ನೆಲ.. ಅಧಿಕಾರದ ಅಖಾಡ.. ಜೋಡೆತ್ತು ಜಿದ್ದಾಜಿದ್ದಿ..! ಸಿದ್ದು Vs ಡಿಕೆ.. ಬಿಹಾರದಲ್ಲಿ ಬಲ ಪ್ರದರ್ಶನ..! ದಂಡು ಕಟ್ಟಿ ದಂಡಯಾತ್ರೆ.. ಪಟ್ಟಕ್ಕೆ ಹಾಕಿದ್ರಾ ಪಟ್ಟು..? ಸಿದ್ದು ಜೊತೆ ಒಂದು ಕಾಲದ ಶತ್ರು.. ಬದಲಾಯ್ತಾ ಲೆಕ್ಕ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಸಿದ್ದು ಡಿಕೆ ಬಿಹಾರ ಬಲಭೀಮ
ಸಿದ್ದರಾಮಯ್ಯ ಹಾಗೂ ಡಿಕೆ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರೋ ಸಂಘರ್ಷ ಗುಟ್ಟಾಗಿಯೇನು ಉಳಿದಿಲ್ಲ.. ಸೈಲೆಂಟ್ ಆಗಿಯೇ ಇರೋ ಈ ಸಂಘರ್ಷ ಆಗಾಗ ಜ್ವಾಲಾಮುಖಿಯಂತೆ ಸ್ಫೋಟಿಸುತ್ತೆ.. ಈಗಲೂ ಅದು ಬಲಪ್ರದರ್ಶನದ ರೂಪದಲ್ಲಿ ಸ್ಫೋಟಿಸಿದೆ.. ಹಾಗಿದ್ರೇ ಈ ಹೊತ್ತಲ್ಲೇ ಸಿದ್ದು ಹಾಗೂ ಡಿಕೆ, ರಾಹುಲ್ ಗಾಂಧಿಯೆದುರು ತಮ್ಮ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಯಾಕೆ ಗೊತ್ತಾ..?